ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಮಜೇಥಿಯಾ ಫೌಂಡೇಶನ್ ಸಹಾಯ - ಬಾಲಕಿಗೆ ಮಜೇಥಿಯಾ ಫೌಂಡೇಶನ್ನಿಂದ ಧನ ಸಹಾಯ ಸುದ್ದಿ
🎬 Watch Now: Feature Video

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ನಗರದ ಮಜೇಥಿಯಾ ಫೌಂಡೇಶನ್ ಸಹಾಯಹಸ್ತ ಚಾಚಿದೆ. ಅಂಕಿತಾ ರೇವಣಕರ್ (15) ಎಂಬ ಬಾಲಕಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದಳು. ಅಂಕಿತ ವಿಕಲಚೇತನೆ ಸಹ ಆಗಿದ್ದು, ಬಡತನದಲ್ಲಿರುವ ತಂದೆ ತಾಯಿ, ಅಂಕಿತಾಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇದನ್ನು ಮನಗಂಡ ಮಜೇಥಿಯಾ ಫೌಂಡೇಶನ್ ಅಧ್ಯಕ್ಷ ನಂದಿನಿ ಕಶ್ಯಪ್ ಮಜೇಥಿಯಾ ಚಿಕಿತ್ಸೆ ಸಹಾಯವಾಗಲೆಂದು ಹತ್ತು ಸಾವಿರ ರೂ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಗುರುರಾಜ ಹೂಗಾರ, ಸೇರಿದಂತೆ ಮುಂತಾದವರು ಇದ್ದರು.