ಕೊರೊನಾ ಬಗ್ಗೆ ವಿನೂತನವಾಗಿ ಜಾಗೃತಿ ಮೂಡಿಸಿದ ಮೈಸೂರು ಕಲಾವಿದ - Corona awareness in Mysore district
🎬 Watch Now: Feature Video
ಮೈಸೂರು: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಮಾದರಿಯ ಚಿತ್ರವನ್ನು ಮುಖದ ಮೇಲೆ ಧರಿಸಿ ಜಿಲ್ಲೆಯಲ್ಲಿ ಕಲಾವಿದನೊಬ್ಬ ಜಾಗೃತಿ ಮೂಡಿಸುತ್ತಿದ್ದಾನೆ. ನಗರದಲ್ಲಿ ಇಂದಿನಿಂದ ಮಾರ್ಚ್ 31ರ ವರೆಗೆ ಲಾಕ್ ಡೌನ್ ಘೋಷಣೆಯಾಗಿದ್ದರೂ ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಕಲಾವಿದ ಯೋಗಾನಂದ್ ಅವರು ಕೊರೊನಾ ವೈರಸ್ ಚಿತ್ರವನ್ನು ಮುಖದ ಮೇಲೆ ಹಾಕಿಕೊಂಡು, ಮಾಸ್ಕ್ ಧರಿಸಿ ಈ ವೈರಸ್ ಗೆ ಯಾವುದೇ ಚಿಕಿತ್ಸೆ ಕಂಡುಹಿಡಿದಿಲ್ಲ. ಆದ್ದರಿಂದ ಇದನ್ನು ಗಂಭೀರವಾಗಿ ತೆರೆದುಕೊಳ್ಳಬೇಕು ಎಂದು ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ, ಗಾಂಧಿ ವೃತ್ತ ಮುಂತಾದ ಕಡೆಗಳಲ್ಲಿ ಸುತ್ತಿ ಜಾಗೃತಿ ಮೂಡಿಸುತ್ತಿದ್ದಾರೆ.