ದಿನಬೆಳಗಾಗುವಷ್ಟರಲ್ಲಿ ಹಸುಗಳು ನಾಪತ್ತೆ, ಅಷ್ಟಕ್ಕೂ ಅವು ಸ್ಮಗಲ್ ಆಗುತ್ತಿದ್ದು ಎಲ್ಲಿಗೆ? - arrest of cattle thieves at Anekal Bengaluru
🎬 Watch Now: Feature Video
ಆನೇಕಲ್: ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲ ಪ್ರದೇಶದ ರೈತರು ಕೃಷಿ ಚಟುವಟಿಕೆಯ ಜೊತೆಗೆ ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಹೈನುಗಾರಿಕೆಯಲ್ಲಿ ತೊಡಗಿದ್ದ ರೈತರಿಗೆ ಕಳೆದ ಕಳೆ ದಿನಗಳ ಹಿಂದೆ ದೊಡ್ಡ ಶಾಕ್ ಕಾದಿತ್ತು. ಅದೇನೆಂದ್ರೆ ರಾತ್ರಿ ಕೊಟ್ಟಿಗೆಯಲ್ಲಿ ಇದ್ದ ಪಶುಗಳು ಬೆಳಗಾಗುವುದರಲ್ಲಿ ನಾಪತ್ತೆಯಾಗ್ತಿದ್ದವು. ಇದು ರೈತರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಹಸುಗಳು ಎಲ್ಲಿಗೆ ಕಳ್ಳಸಾಗಣೆ ಆಗ್ತಿದ್ದವು ಎಂಬ ಭಯಾನಕ ಸತ್ಯವನ್ನ ಪೊಲೀಸರು ಬಹಿರಂಗಪಡಿಸಿದ್ದಾರೆ.