ಪೊಗರು ಚಿತ್ರ ಬಿಡುಗಡೆ: ಕೊಪ್ಪಳ, ಗದಗದಲ್ಲಿ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು - ರಾಜ್ಯಾದ್ಯಂತ ಪೊಗರು ಸಿನಿಮಾ ಬಿಡುಗಡೆ'
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10688693-thumbnail-3x2-byngjpg.jpg)
ಗದಗ/ಕೊಪ್ಪಳ/ಬಳ್ಳಾರಿ: ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಅಭಿನಯದ ಪೊಗರು ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ನೆಚ್ಚಿನ ನಟನ ಸಿನಿಮಾ ನೋಡಿ ಅಭಿಮಾನಿಗಳು ಸಂಭ್ರಮಿಸಿದರು. ಸಿನಿಮಾ ಬಿಟುಗಡೆಯಾದ ಮೊದಲ ದಿನವೇ ಚಿತ್ರಮಂದರಗಳಿಗೆ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಇದೇ ವೇಳೆ, ಅಭಿಮಾನಿಗಳು ಧೃವ ಸರ್ಜಾ ಕಟೌಟ್ಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿ ಪಾಟಾಕಿ ಸಿಡಿಸಿ ಸಿಹಿ ಹಂಚಿ ಖುಷಿ ಪಟ್ಟರು. ಇತ್ತ ಬಳ್ಳಾರಿಯಲ್ಲೂ ಅಭಿಮಾನಿಗಳ ಸಂಭ್ರಮ ಜೋರಾಗಿದ್ದು, ಕಟೌಟ್ಗೆ ದೊಡ್ಡದಾದ ಹಾರ - ತುರಾಯಿ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.