ಹವ್ಯಾಸವೇ ಮುಂದೆ ಪ್ರಾಣಿ ಸಂರಕ್ಷಣಾ ಕಾಯಕವಾಯ್ತು.. ಇವರು ದಯಾಮಯಿ! - Animal lovers
🎬 Watch Now: Feature Video
ಉತ್ತರಕನ್ನಡದ ಶಿರಸಿ - ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ನೂತನವಾಗಿ ಈ ಪೆಟ್ ಅಮೇಜಿಂಗ್ ಪ್ಲಾನೆಟ್ ತಲೆ ಎತ್ತಿದೆ. ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿರುವ ಅನಾಥ ಪ್ರಾಣಿಗಳು, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ರಾಣಿಗಳಿಗೆ ಈ ಪ್ಲಾನೆಟ್ ಆಶ್ರಯ ತಾಣ.ಯಾವುದೇ ಪ್ರಾಣಿ ಸಂಕಷ್ಟದಲ್ಲಿದೆ ಅನ್ನೋ ಸುದ್ದಿ ತಿಳಿದರೂ ತಕ್ಷಣ ಅಲ್ಲಿಗೆ ಧಾವಿಸುವ ರಾಜೇಂದ್ರ ಸಿರ್ಸಿಕರ್, ಅವುಗಳಿಗೊಂದು ನೆಲೆ ಒದಗಿಸುವ ಕೆಲಸ ಮಾಡ್ತಾರೆ. ತಮ್ಮ ಮನೆ ಎದುರಿನ ಭೂಮಿಯನ್ನೇ ಉದ್ಯಾನವನವನ್ನಾಗಿ ಪರಿವರ್ತಿಸಿದ್ದಾರೆ.'ಪೆಟ್ ಅಮೇಜಿಂಗ್ ಪ್ಲಾನೆಟ್ ಹೆಸರಿಗೆ ತಕ್ಕಂತೆ ಇಲ್ಲಿರೋ ಪ್ರಾಣಿಪಕ್ಷಿಗಳೆಲ್ಲ ನೋಡುಗರಿಗೆ ಪೆಟ್ ಅನ್ನಿಸುತ್ತವೆ.
TAGGED:
Animal lovers