ಕಲ್ಲು ದೇವರು ಹಾಲು ಕುಡಿಯುವುದೇ,, ಇದು ಮೌಢ್ಯ ಅಷ್ಟೇ ಅಲ್ಲ, ಮೂರ್ಖತನ.. - ದೈವ ಶಕ್ತಿಯ ವಿಚಿತ್ರ ಘಟನೆ
🎬 Watch Now: Feature Video

ಬೆಂಗಳೂರು:ನಗರದ ಹೆಚ್ಎಎಲ್ ರಸ್ತೆಯ ಸುಧಾಮನಗರದಲ್ಲಿ ದೈವ ಶಕ್ತಿಯ ವಿಚಿತ್ರ ಘಟನೆಯೊಂದು ಜರುಗಿದೆಯಂತೆ. ದೇವಾಲಯದಲ್ಲಿ ಅಂಗಾಳ ಶ್ರೀಪರಮೇಶ್ವರಿ ದೇವಿಯೇ ಭಕ್ತರಿಂದ ಹಾಲು ಕುಡಿದಿದಾಳಂತೆ. ಹಾಲು ಕುಡಿದಾಳೆ ಅಂತಾ ವಿಡಿಯೋ ವೈರಲ್ ಆಗುತ್ತಿದೆ. ಕಲ್ಲಿನ ಮೂರ್ತಿಯೇ ಭಕ್ತರಿಂದ ಹಾಲು ಕುಡಿದಿದೆಯಂತೆ. ಇಂತಹ ಅಚ್ಚರಿ ನಡೆದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಅಂಗಾಳ ಶ್ರೀಪರಮೇಶ್ವರಿ ದೇವಿಗೆ ಹಾಲು ಕುಡಿಸಲು ಭಕ್ತರ ದಂಡೇ ದೇವಸ್ಥಾನದತ್ತ ಬಂದಿತು. ನಿನ್ನೆ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೂ ದೇವಿಗೆ ಭಕ್ತರು ಹಾಲು ಕುಡಿಸಿದ್ದಾರೆ. ಆದರೆ, ರಾತ್ರಿ 10 ಗಂಟೆ ನಂತರ ದೇವಿ ಹಾಲು ಕುಡಿಯುವುದನ್ನೇ ನಿಲ್ಲಿಸಿದ್ದಾಳಂತೆ. ವಿಡಿಯೋದಲ್ಲಿ ದೇವಿ ಹಾಲು ಕುಡಿದಿರೋ ಬಗ್ಗೆ ಸರಿಯಾಗಿ ಕಾಣಿಸೋದೇ ಇಲ್ಲ. ಆದರೂ ಜನ ಇನ್ನ ನಂಬ್ತಾರಂದ್ರೇ, ಇದು ಬರೀ ಮೌಡ್ಯ ಅಷ್ಟೇ ಅಲ್ಲ, ಜನರನ್ನ ಮೂರ್ಖರನ್ನಾಗಿಸುವ ತಂತ್ರ ಅಷ್ಟೇ..