ಆನೆಗುಂದಿ ಉತ್ಸವಕ್ಕೆ ಕಲಾವಿದರು, ಕಲಾತಂಡಗಳ ಆಯ್ಕೆ ಪ್ರಕ್ರಿಯೆ ಆರಂಭ - ಕೊಪ್ಪಳ ಆನೆಗುಂದಿ ಉತ್ಸವ ಲೆಟೆಸ್ಟ್ ನ್ಯೂಸ್
🎬 Watch Now: Feature Video

ಕೊಪ್ಪಳ: ಜನವರಿ 09, 10 ಈ ಎರಡು ದಿನಗಳ ಕಾಲ ನಡೆಯುವ ಆನೆಗುಂದಿ ಉತ್ಸವಕ್ಕೆ ವಿವಿಧ ಪ್ರಕಾರದ ಕಲಾವಿದರು ಹಾಗೂ ಕಲಾತಂಡಗಳ ಆಯ್ಕೆ ಪ್ರಕ್ರಿಯೆ ನಗರದಲ್ಲಿ ಪ್ರಾರಂಭವಾಗಿದೆ. ಇಂದಿನಿಂದ ಡಿಸೆಂಬರ್ 14 ರವರೆಗೆ ಕಲಾತಂಡಗಳ ಆಯ್ಕೆ, ಸಂದರ್ಶನ ಪ್ರಕ್ರಿಯೆ ನಗರದ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಸಾಹಿತ್ಯ ಭವನದಲ್ಲಿಂದು ಸುಗಮ ಸಂಗೀತ ಹಾಗೂ ವಚನ ಸಂಗೀತ ಪ್ರಕಾರಗಳಿಗೆ ಅರ್ಜಿ ಸಲ್ಲಿಸಿದ್ದ ಕಲಾವಿದರ ಹಾಗೂ ಕಲಾತಂಡಗಳ ಆಯ್ಕೆ ಸಂದರ್ಶನ ನಡೆಯಿತು. ಜಿಲ್ಲೆಯಿಂದ ಸುಮಾರು 80 ಕಲಾವಿದರು ಸೇರಿದಂತೆ ಕಲಾತಂಡಗಳು ವಚನ ಸಂಗೀತ ಹಾಗೂ ಸುಗಮ ಸಂಗೀತ ಪ್ರಕಾರದಲ್ಲಿ ಭಾಗವಹಿಸಿದ್ದರು.