ಜಂಬೂಸವಾರಿಗೆ ಎಲ್ಲಾ ಸಿದ್ದತೆ ಮುಗಿದಿದೆ: ಈಟಿವಿ ಭಾರತ್ಗೆ ಉಸ್ತುವಾರಿ ಸಚಿವರ ಹೇಳಿಕೆ - jamboo savari news
🎬 Watch Now: Feature Video
ಮೈಸೂರು: ಇಂದು ಅರಮನೆಯ ಆವರಣದಲ್ಲಿ ಜಂಬೂಸವಾರಿ ಸಿದ್ಧತೆಯನ್ನು ಪರಿಶೀಲನೆ ಮಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಈಟಿವಿ ಭಾರತ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಂಬೂಸವಾರಿಗೆ ಸಕಲ ಸಿದ್ಧತೆ ಮುಗಿದಿದೆ. ತಜ್ಞರ ಸಮಿತಿ ನಿರ್ಧರಿಸಿರುವಂತೆ ಜಂಬೂಸವಾರಿಗೆ 300 ಜನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ನಾಳೆ ಮಧ್ಯಾಹ್ನ ಸಿಎಂ ಬಿಎಸ್ವೈ ಮೈಸೂರಿಗೆ ಆಗಮಿಸಿ ನಂದಿ ಧ್ವಜ ಪೂಜೆ ಹಾಗೂ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಈ ಬಾರಿ ಮೈಸೂರು ಉಸ್ತುವಾರಿ ಸಚಿವನಾಗಿ ದಸರಾ ಮಾಡಲು ಅವಕಾಶ ದೊರಕಿದ್ದು ಸಂತೋಷವಾಗಿದೆ. ನಾಳಿನ ಜಂಬೂಸವಾರಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದರು.