ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮತ್ತೆ ನಟಿಮಣಿಯರಿಂದ ಕಿರಿಕ್! - ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ
🎬 Watch Now: Feature Video
ಬೆಂಗಳೂರು: ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕಿರಿಕ್ ಮಾಡಿದ್ದ ನಟಿ ಸಂಜನಾ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಟಿ ರಾಗಿಣಿ ಜೊತೆ ಸೇರಿಕೊಂಡು ಮತ್ತೆ ಕಿರಿಕ್ ಮಾಡಿದ್ದಾರೆ ಎನ್ನಲಾಗ್ತಿದೆ. ನಾವು ಸಾಂತ್ವನ ಕೇಂದ್ರದಲ್ಲಿ ಇದ್ವಿ. ಇಲ್ಲಿಗೇಕೆ ಕರೆ ತಂದಿದ್ದೀರಾ? ಯಾಕೆ ನಮ್ಮನ್ನು ದಿಕ್ಕು ತಪ್ಪಿಸುತ್ತಿದ್ದೀರಾ? ನಾವು ಮಾದಕ ಲೋಕದಲ್ಲಿ ಭಾಗಿಯಾಗಿಲ್ಲ. ನಮ್ಮನ್ನು ಸಾಂತ್ವನ ಕೇಂದ್ರದಲ್ಲೇ ಬಿಡಿ ಎಂದು ಕಿರಿಕ್ ಮಾಡಿದ್ದಾರೆ. ಸದ್ಯ ತನಿಖಾಧಿಕಾರಿಗಳು ಆರೋಪಿಗಳ ಮಾತಿಗೆ ಸೊಪ್ಪು ಹಾಕದೆ ತನಿಖೆಯನ್ನು ಮುಂದುವರಿಸಿದ್ದಾರೆ.