ಜಗಳೂರಿನಲ್ಲಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು - Actor kiccha sudeep
🎬 Watch Now: Feature Video
ದಾವಣಗೆರೆ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬವನ್ನು ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಆಚರಿಸಲಾಯಿತು. ಬಿಸ್ತುವಳ್ಳಿ ಗ್ರಾಮದ ಬಾಬು ನೇತೃತ್ವದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗ ಹಾಗೂ ಎಸ್.ವಿ.ರಾಮಚಂದ್ರಪ್ಪರ ಅಭಿಮಾನಿಗಳು ಕಿಚ್ಚನ ಭಾವಚಿತ್ರಕ್ಕೆ ಹೂವಿನ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು. ಕೇಕ್ ಕಟ್ ಮಾಡಿ ಪರಸ್ಪರ ಸಿಹಿ ತಿನಿಸಿಕೊಂಡ ಅಭಿಮಾನಿಗಳು, ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ-ಬೇರೆ ರಾಜ್ಯಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಸುದೀಪ್ಗೆ ದೇವರು ಆರೋಗ್ಯ ನೀಡಲಿ. ಅವರ ಸಿನಿಮಾಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.