ಎತ್ತಿನಗಾಡಿಗೆ ಲಾರಿ ಡಿಕ್ಕಿ.. ಎತ್ತು ಮತ್ತು ರೈತ ಸಾವು - ಎತ್ತಿನಗಾಡಿ
🎬 Watch Now: Feature Video

ಎತ್ತಿನಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದು ಎತ್ತು ಮತ್ತು ರೈತ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನಿರ್ಮಲಾ ಲಾಡ್ಜ್ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮದ ನಿವಾಸಿ ಕೆಂಚಪ್ಪ ಮೃತಪಟ್ಟವರು. ಇವರು ಎತ್ತಿನ ಗಾಡಿ ಕಟ್ಟಿಕೊಂಡು ಜಮೀನಿಂದ ಮನೆಗೆ ವಾಪಸಾಗುವಾಗ ಹಿರಿಯೂರು ಕಡೆಯಿಂದ ಬರುತ್ತಿದ್ದ ಲಾರಿ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎತ್ತು ಹಾಗೂ ಕೆಂಚಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.