ದೇಶದಲ್ಲಿ ಹೆಚ್ಚುತ್ತಿದೆ ವ್ಯಾಘ್ರ ಸಂತತಿ ; ಮಲೆನಾಡಿನ ಕಾಡುಗಳಲ್ಲಿರುವ ಹುಲಿಗಳೆಷ್ಟು? - ಭಾರತದಲ್ಲಿ ಹುಲಿಗಳ ಸಂಖ್ಯೆ ಏರಿಕೆ
🎬 Watch Now: Feature Video
ಭಾರತದ ರಾಷ್ಟ್ರೀಯ ಪ್ರಾಣಿ ತನ್ನ ಸಂತತಿಯನ್ನು ಗಣನೀಯವಾಗಿ ಏರಿಸಿಕೊಂಡಿದೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. 526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ರೆ, 442 ಹುಲಿಗಳು ಪತ್ತೆಯಾಗುವ ಮೂಲಕ ಉತ್ತರಾಖಂಡ್ 3ನೇ ಸ್ಥಾನ ಪಡೆದಿದೆ. ಇತ್ತೀಚಿನ ಹುಲಿ ಗಣತಿ ಪ್ರಕಾರ, ರಾಜ್ಯದಲ್ಲಿ 524 ಹುಲಿಗಳು ಕಂಡು ಬಂದಿದ್ದು, ಮಲೆನಾಡು ವಿಭಾಗದಲ್ಲೇ 371 ಹುಲಿಗಳಿವೆ ಎಂದು ಕಾವೇರಿ ವನ್ಯಜೀವಿ ಅಭಯಾರಣ್ಯ (ಸಿಡಬ್ಲ್ಯೂಎಸ್) ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಕಾಫಿನಾಡಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು? ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..