ರಾಯಚೂರಲ್ಲಿ ಮೊಹರಂ ಸಂಭ್ರಮ: ದಫನ್ ದಿನದ ವಿಶೇಷ ಆಚರಣೆ - raichur latest news
🎬 Watch Now: Feature Video
ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದಲ್ಲಿ ಮೊಹರಂನ್ನು ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸುವ ಕ್ರಮವಿದೆ. ಐತಿಹಾಸಿಕ ಮುದಗಲ್ ಮೊಹರಂ ಕೊನೆ ದಿನ, ಸ್ಥಳೀಯ ಸಂತೆ ಬಯಲಿನಲ್ಲಿ ನೂರಾರು ಆಲಂ (ಪೀರ್ ದೇವರು)ಗಳ ವೈಭವದ ಭೇಟಿಯನ್ನು ಜನರು ಕಣ್ತುಂಬಿಕೊಂಡರು. ಹಬ್ಬದ ನಿಮಿತ್ತ ಅಲಾಯಿ ದೇವರಿಗೆ ಚೋಂಗೆ, ಶರಬತ್, ಫತೇಹ ಸಲ್ಲಿಸಿ ಎಲ್ಲರಿಗೂ ಹಂಚಿದರು. ಮತ್ತೊಂದೆಡೆ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹುಸೇನ್ ಅವರ ತ್ಯಾಗ ಬಲಿದಾನದ ಕುರಿತಾಗಿ ಅವರ ಹೆಸರಿನಲ್ಲಿ ಉಪವಾಸ ಆಚರಣೆನ್ನೂ ಮಾಡಲಾಗಿತ್ತು. ಇನ್ನು, ಪೀರ್ ದೇವರ ಭೇಟಿ ಸಂದರ್ಭದಲ್ಲಿ ಆಕಾಶದಲ್ಲಿ ಬಣ್ಣಬಣ್ಣದ ಪಟಾಕಿಗಳು ಬೆಳಕಿನ ರಂಗೋಲಿ ಮೂಡಿಸಿದವು.