ದಸರಾದಲ್ಲಿ ಪೊಲೀಸ್ ಬ್ಯಾಂಡ್ ರಸದೌತಣ,38 ತಂಡಗಳಿಂದ 570 ಸಿಬ್ಬಂದಿ ಭಾಗಿ - dasara news
🎬 Watch Now: Feature Video
ಮೈಸೂರು: ದಸರಾ ಮಹೋತ್ಸವದಲ್ಲಿ ಜನರನ್ನು ಸೆಳೆಯುವ ಮತ್ತೊಂದು ಸಾಧನ ಅಂದ್ರೆ, ಪೊಲೀಸ್ ಬ್ಯಾಂಡ್. ಪೊಲೀಸ್ ಬ್ಯಾಂಡ್‌ನಿಂದ ಸುಶ್ರಾವ್ಯವಾಗಿ ಮೂಡಿ ಬರುವ ಸಂಗೀತಕ್ಕೆ ವಿಶೇಷ ಮಾಧುರ್ಯವಿದೆ. ಈ ಸುಮಧುರ ಸಂಗೀತದ ರಸದೌತಣ ನೀಡಲು ಪೊಲೀಸ್ ಸಿಬ್ಬಂದಿ ಇಂದಿನಿಂದ ಅರಮನೆ ಮುಂಭಾಗದಲ್ಲಿ ತಾಲೀಮು ಆರಂಭಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ 38 ತಂಡಗಳಿಂದ 570 ಮಂದಿ ತಾಲೀಮು ನಡೆಸುತ್ತಿದ್ದಾರೆ. ಆಯುಧಪೂಜೆ ಹಿಂದಿನ ದಿವಸ ಅರಮನೆ ಮುಂಭಾಗದಲ್ಲಿ ಗೃಹಮಂತ್ರಿ ಹಾಗೂ ಪೊಲೀಸ್ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಪೊಲೀಸರು ಈ ಸಂಗೀತ ರಸದೌತಣ ನೀಡಲಿದ್ದಾರೆ.