ಕಲಘಟಗಿಯಲ್ಲಿ ಅದ್ಧೂರಿಯಾಗಿ ನಡೆದ ಗ್ರಾಮದೇವತೆ ಜಾತ್ರೆ - village fest Kalaghatagi
🎬 Watch Now: Feature Video

ಕಲಘಟಗಿ: ಮೂರು ವರ್ಷಕ್ಕೊಮ್ಮೆ ನಡೆಯುವ ಧಾರವಾಡ ಜಿಲ್ಲೆಯ ಕಲಘಟಗಿ ಗ್ರಾಮದೇವಿ ಜಾತ್ರೆಯು ಅದ್ಧೂರಿಯಾಗಿ ನಡೆಯಿತು. ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಡೊಳ್ಳು, ಜಗ್ಗಲಿಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು. ಪೂರ್ಣಕುಂಭ ಮೆರವಣಿಗೆಯೊಂದಿಗೆ ದ್ಯಾಮವ್ವ, ದುರ್ಗವ್ವರನ್ನು ಸ್ವಾಗತಿಸಿ, ಅಕ್ಕಿ ಓಣಿಯ ಚೌತ ಮನೆ ಕಟ್ಟಿಯಲ್ಲಿ ಗ್ರಾಮ ದೇವಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಬೆಂಡಿಗೇರಿ, ಬೆಲವಂತರ, ದಾಸ್ತಿಕೊಪ್ಪ, ಹುಲಿಕಟ್ಟಿ, ಮಾಚಾಪುರ ಗ್ರಾಮದ ಜೋಗತಿಯರು ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಕಲಘಟಗಿ ಗ್ರಾಮದೇವತೆ ಜಾತ್ರೆ ಒಂಭತ್ತು ದಿನಗಳ ಕಾಲ ಅದ್ಧೂರಿಯಾಗಿ ನೆರವೇರಲಿದೆ.