ಉಕ್ಕಿ ಹರಿದ ಕೃಷ್ಣೆ... ಕಲಬುರಗಿ-ರಾಯಚೂರು ಜಿಲ್ಲೆಗಳ ಸಂಪರ್ಕ ಸೇತುವೆ ಮುಳುಗಡೆ - ಕಲಬುರಗಿ-ರಾಯಚೂರು

🎬 Watch Now: Feature Video

thumbnail

By

Published : Sep 9, 2019, 10:04 AM IST

ಕೃಷ್ಣ ನದಿಯ ಪ್ರವಾಹದಿಂದ ಕಲಬುರಗಿ-ರಾಯಚೂರು ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಹೂವಿನಹೆಡಗಿ ಸೇತುವೆ ಜಲಾವೃತವಾಗಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಬಳಿ ಬರುವ ಈ ಸೇತುವೆ ಮೇಲೆ ನೀರು ಹರಿಯುತ್ತಿದೆ. ಹಾಗಾಗಿ ಸೇತುವೆ ಮೇಲೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಓಡಾಡದಂತೆ ತಡೆಯಲು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ನಾರಾಯಣಪುರ ಜಲಾಶಯದಿಂದ 2.62 ಲಕ್ಷ ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿಬಿಟ್ಟಿರುವ ಪರಿಣಾಮ ಈ ಸೇತುವೆ ವಲಾವೃತವಾಗಿದೆ. ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗುವುದಲ್ಲದೆ ನದಿ ಪಾತ್ರದಲ್ಲಿ ಗ್ರಾಮಗಳಿಗೆ ನೀರು ನುಗ್ಗುವ ಜಲ ಸಂಕಷ್ಟ ಎದುರಾಗಿದೆ. ಜಿಲ್ಲಾಡಳಿತದಿಂದ ನೆರೆ ಎದುರಿಸಲು ಮುಂಜಾಗೃತಾ ಕ್ರಮ ತೆಗೆದುಕೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.