ಮೀನು ಹಿಡಿಯಲು ಹಾಕಿದ್ದ ಬಲೆಗೆ ಬಿತ್ತು ಬೃಹತ್ ಗಾತ್ರದ ಹೆಬ್ಬಾವು... ನೋಡಿ ಹೌಹಾರಿದ ಮೀನುಗಾರರು! - python caught in ramnagar
🎬 Watch Now: Feature Video

ರಾಮನಗರ: ನಗರದ ಅರ್ಕಾವತಿ ಕೊಳ್ಳದಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಬೃಹತ್ ಗಾತ್ರದ ಹೆಬ್ಬಾವೊಂದು ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ನಗರದ ಹೃದಯ ಭಾಗದಲ್ಲೇ ಹರಿಯುವ ಅರ್ಕಾವತಿ ನದಿಯ ಜತೆ ಕೊಳಚೆ ನೀರು ಹರಿಯುತ್ತದೆ. ಆದರೂ ಮಂಚನಬೆಲೆ ಡ್ಯಾಂ ನಿಂದ ಹರಿಯುವ ನೀರಿನಲ್ಲಿ ಮೀನು ಹಿಡಿಯುವವರ ಸಂಖ್ಯೆ ಜೋರಾಗಿದೆ. ಮೀನಿಗಾಗಿ ಹಾಕಿದ್ದ ಬಲೆಗೆ ಮೀನಿನ ಜೊತೆಗೆ ಹೆಬ್ಬಾವೊಂದು ಸಿಕ್ಕಿಹಾಕಿಕೊಂಡಿದೆ.ಮೀನುಗಾರರು ದೊಡ್ಡ ಮೀನು ಬಿದ್ದಿದೆ ಎಂಬ ಖುಷಿಯಲ್ಲಿ ಮೇಲಕ್ಕೆತ್ತಿದ್ದಾರೆ. ಆದರೆ, ಅವರಿಗೆ ಅಲ್ಲಿ ಸಿಕ್ಕಿದ್ದು ಬೃಹತ್ ಗಾತ್ರದ ಹೆಬ್ಬಾವು. ಹಾವು ನೋಡಿ ಮೀನುಗಾರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಎಷ್ಟೇ ಪ್ರಯತ್ನಿಸಿದರೂ ಬಿಡಿಸಿಕೊಳ್ಳಲು ಸಾಧ್ಯವಾಗದೆ ಬಲೆಯಲ್ಲಿಯೇ ಅದು ಸಾವನ್ನಪ್ಪಿದೆ.