ಬಾಗಲಕೋಟೆ: 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಸಮ್ಮೇಳನಾಧ್ಯಕ್ಷರ ಮೆರವಣಿಗೆ - ಪ್ರೊ ಮಲ್ಲಿಕಾ ಘಂಟೆ ಅವರ ಮೆರವಣಿಗೆ
🎬 Watch Now: Feature Video
ಬಾಗಲಕೋಟೆ: ಜಿಲ್ಲೆಯ ಶಿರೂರು ಗ್ರಾಮದಲ್ಲಿ 9 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರಾದ ಹಂಪಿ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲಿಕಾ ಘಂಟೆ ಅವರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಗ್ರಾಮೀಣ ಭಾಗದ ಸೂಗಡು ಬಿಂಬಿಸುವ ಎತ್ತಿನ ಚಕ್ಕಡಿಯಲ್ಲಿ ಸಮ್ಮೇಳನಾಧ್ಯಕ್ಷರು ಕುಳ್ಳಿರಿಸಲಾಗಿತ್ತು. ಈ ವೇಳೆ ಜಾನಪದ ವಾದ್ಯಗಳು, ಮಹಿಳಾ ಡೊಳ್ಳು ಕುಣಿತ ಮತ್ತು ಬೃಹತ್ ಆಕಾರದ ಗೊಂಬೆ ಕುಣಿತ ಕಂಡು ಬಂತು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಸ್ಥಳೀಯ ವೀರಶೈವ ಗ್ರಾಮೀಣ ವಿದ್ಯಾವರ್ಧಕ ಸಂಘದ ಶಾಲೆಯ ಆವರಣಕ್ಕೆ ಕರೆತರಲಾಯಿತು. ನಂತರ ವೇದಿಕೆ ಸಮಾರಂಭ ಜರುಗಿತು.