ಮಲೆನಾಡಿನಲ್ಲಿ ಕೊರೊನಾ ವಿಸ್ತರಣೆ: ಒಂದೇ ದಿನ 33 ಪ್ರಕರಣ ದಾಖಲು - ಶಿವಮೊಗ್ಗ 33 ಕೊರೊನಾ ಪ್ರಕರಣ ದಾಖಲು ಸುದ್ದಿ
🎬 Watch Now: Feature Video
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಲೇ ಇವೆ. ನಿನ್ನೆ ಒಂದೇ ದಿನ 33 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 318 ಕ್ಕೆ ಏರಿಕೆಯಾಗಿದೆ. 12 ಜನ ಸೋಂಕಿತರು ಬಿಡುಗಡೆಯಾಗಿದ್ದಾರೆ. ಇದುವರೆಗೂ 137 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಹಾಗೂ ಗಾಜನೂರಿನ ಮೂರಾರ್ಜಿ ವಸತಿ ಶಾಲೆಯಲ್ಲಿ 177 ಸೋಂಕಿತರು ದಾಖಲಾಗಿದ್ದಾರೆ. ನಿನ್ನೆ ಒಂದೇ ದಿನ 593 ಜನರ ಸ್ವ್ಯಾಬ್ ಪರೀಕ್ಷೆಗೆ ತೆಗೆದು ಕೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 18,712 ಜನರ ಸ್ವ್ಯಾಬ್ ತೆಗೆದು ಕೊಂಡಿದ್ದಾರೆ. ಇದರಲ್ಲಿ17,224 ಜನರ ಫಲಿತಾಂಶ ಬಂದಿದೆ. ಇನ್ನೂ 1166 ಫಲಿತಾಂಶ ಬರಬೇಕಿದೆ.