ಜನರನ್ನ ಸೆಳೆಯುವುದರಲ್ಲಿ ದಾಖಲೆ ಬರೆದ ಲಾಲ್ ಬಾಗ್... ಒಂದೇ ದಿನಕ್ಕೆ ಸಂಗ್ರವಾಯ್ತು ಇಷ್ಟು ಲಕ್ಷ ಹಣ! - ಲಾಲ್ಬಾಗ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4147899-thumbnail-3x2-bangaloejpg.jpg)
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದಲ್ಲಿರುವ ಲಾಲ್ಬಾಗ್ನಲ್ಲಿ 210ನೇ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಲಾಗಿದ್ದು, ಸುಮಾರು 1,72,000 ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲಿ ವಯಸ್ಕರು 1,31,000, ಸೇರಿದಂತೆ 41,000 ಮಕ್ಕಳು ವೀಕ್ಷಣೆ ಮಾಡಿದರು. ಒಂದು ದಿನಕ್ಕೆ ಬರೋಬ್ಬರಿ 80 ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಸಂಗ್ರಹವಾಗಿದೆ. ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ ಇತಿಹಾಸದಲ್ಲೇ ನಿನ್ನೆ ಅತಿ ಹೆಚ್ಚು ಜನ ಭೇಟಿ ನೀಡಿದ್ದು, ಮಳೆ ಮತ್ತು ಉತ್ತರ ಕರ್ನಾಟಕದಲ್ಲಿನ ನೆರೆ ಇಲ್ಲದಿದ್ದರೆ ಈ ಬಾರಿ ಬಂದು ದಿನದ ಕಲೆಕ್ಷನ್ 1 ಕೋಟಿಗೂ ಅಧಿಕವಾಗುತ್ತಿತ್ತು ಎಂಬುದು ಇಲ್ಲಿನ ಅಧಿಕಾರಿಗಳ ಮಾತಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನ ಹಲವು ವಿಶೇಷತೆಗಳೊಂದಿಗೆ ತನ್ನತ್ತಾ ಸೆಳೆಯುತ್ತಿದೆ. ಈ ಕಾರ್ಯಕ್ರಮ ಆ.18ರವರೆಗೂ ನಡೆಯಲಿದೆ.