ಸರ್ಕಾರ ಮೃತ ನವೀನ್​ ಪಾರ್ಥಿವ ಶರೀರವನ್ನು ಬೇಗ ತರುವ ಕೆಲಸ ಮಾಡಬೇಕು: ಎಸ್​ ಆರ್​​ ಪಾಟೀಲ್​ - ಮೃತ ನವೀನ್​ ನಿವಾಸಕ್ಕೆ ಎಸ್​ಆರ್​​ ಪಾಟೀಲ್​ ಭೇಟಿ

🎬 Watch Now: Feature Video

thumbnail

By

Published : Mar 2, 2022, 6:53 PM IST

Updated : Feb 3, 2023, 8:18 PM IST

ಹಾವೇರಿ: ಕಾಂಗ್ರೆಸ್​ ಮುಖಂಡ ಎಸ್​.ಆರ್​​. ಪಾಟೀಲ್​​ ಅವರು ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಮೃತ ನವೀನ್​​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ತ್ವರಿತವಾಗಿ ಉಕ್ರೇನ್​ನಲ್ಲಿರುವ ನವೀನ್​ ಪಾರ್ಥಿವ ಶರೀರನ್ನು ಭಾರತಕ್ಕೆ ತರುವ ಕೆಲಸ ಮಾಡಬೇಕು. ಯುವಕನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಿ ಆತನ ಸಹೋದರನಿಗೆ ಯೋಗ್ಯ ಉದ್ಯೋಗ ನೀಡುವಂತೆ ಮನವಿ ಮಾಡಿದರು. ಇದರ ಜೊತೆಗೆ ಉಕ್ರೇನ್​ನಲ್ಲಿ ಸಿಲುಕಿರುವ ಎಲ್ಲಾ ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು, ಆದಷ್ಟು ಬೇಗ ಅವರನ್ನು ರಕ್ಷಿಸಬಬೇಕೆಂದು ಒತ್ತಾಯಿಸಿದರು.
Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.