ಥಿಯೇಟರ್ಗಳಲ್ಲಿ ಶೇ.50 ಸೀಟಿಗೆ ಮನವಿ ಸಲ್ಲಿಕೆ.. ನಿರ್ದೇಶಕ ಯೋಗಿ ಹೇಳಿದ್ದೇನು..? - Bangara son of Bangarada manushya
🎬 Watch Now: Feature Video
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಚಿತ್ರಮಂದಿರಗಳು ಹಾಗೂ ಮಾಲ್ಗಳಲ್ಲಿ ಶೇಕಡಾ 50 ಪರ್ಸೆಂಟ್ ಮಂದಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಇದು ಕನ್ನಡ ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. 'ಖುಷಿ ಖುಷಿಯಾಗಿ' ಹಾಗೂ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ನಿರ್ದೇಶಕ ಯೋಗಿ ಕೂಡಾ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮತ್ತೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೆ ನಮಗೆ ತೊಂದರೆ ಆಗಲಿದೆ. ದಯಮಾಡಿ ಸರ್ಕಾರ ಈಗಿನಂತೆ ಶೇ.100 ರಷ್ಟು ಸೀಟ್ ಮುಂದುವರೆಸಲಿ ಎಂದು ಯೋಗಿ ಮನವಿ ಮಾಡಿದ್ದಾರೆ.