ಸೂರಿ ಸರ್ ಇಟ್ಟ 'ಕಾಕ್ರೋಚ್' ಹೆಸರು ನನ್ನ ಜೀವನವನ್ನೇ ಬದಲಿಸಿತು: ಖಳನಟ ಸುಧೀಂದ್ರ - ನಿರ್ದೇಶಕ ಸೂರಿ
🎬 Watch Now: Feature Video
'ಟಗರು' ಸಿನಿಮಾ ನೋಡಿದವರಿಗೆ ಖಂಡಿತ ಕಾಕ್ರೋಚ್ ಹೆಸರು ನೆನಪಿರುತ್ತದೆ. ಈ ಪಾತ್ರದ ಮೂಲಕ ನಟ ಸುಧೀಂದ್ರ ರಾತ್ರೋರಾತ್ರಿ ಫೇಮಸ್ ಆದರು. ಮೂಲತ: ಸೈನ್ ಬೋರ್ಡ್ ಕಲಾವಿದರಾಗಿರುವ ಸುಧೀಂದ್ರ 'ಅಲೆಮಾರಿ' ಸಿನಿಮಾ ಮೂಲಕ ಆಕಸ್ಮಿಕವಾಗಿ ಸಿನಿರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಇದುವರೆಗೂ ಬಹಳಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ದೊರೆತದ್ದು ಹೇಗೆ, ನಿರ್ದೇಶಕ ಸೂರಿ ಅವರನ್ನು ಭೇಟಿ ಮಾಡಲು ಸುಧಿ ಏನೆಲ್ಲಾ ಸರ್ಕಸ್ ಮಾಡಿದರು, ಟಗರು ಸಿನಿಮಾದಲ್ಲಿ ನಟಿಸುವ ಅವಕಾಶ ಹೇಗೆ ಒಲಿದುಬಂತು? ಎಲ್ಲಾ ವಿಷಯವನ್ನು ಸುಧೀಂದ್ರ ಈ ಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.