ಸ್ಟೆತಸ್ಕೋಪ್ ಹಿಡಿದು ಸಂಗೀತ ಪ್ರಿಯರ ಹೃದಯ ಬಡಿತ ಪರೀಕ್ಷೆ... 'ಐ ಲವ್ ಯು' ಸಂಗೀತ ನಿರ್ದೇಶಕನ ಸಿನಿ ಜರ್ನಿ - ಐ ಲವ್ ಯು
🎬 Watch Now: Feature Video
ಜೂನ್ 14 ರಂದು ಬಿಡುಗಡೆಯಾದ ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ 'ಐ ಲವ್ ಯು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಚಿತ್ರದ ಹಾಡುಗಳಂತೂ ಸಂಗೀತ ಪ್ರಿಯರ ಮನಗೆದ್ದಿದೆ. ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಡಾ. ಕಿರಣ್ಗೆ ಇದು ಮೊದಲನೇ ಸಿನಿಮಾ. ಚೊಚ್ಚಲ ಸಿನಿಮಾದಲ್ಲೇ ಯಶಸ್ವಿ ಸಂಗೀತ ನಿರ್ದೇಶಕ ಎಂದು ಹೆಸರು ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರಾಗಿರುವ
ಡಾ. ಕಿರಣ್ಗೆ ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಆಫರ್ ಬರುತ್ತಿದೆಯಂತೆ.