ಹಸಿದವರಿಗೆ ಅಭಿಮಾನಗಳಿಂದ ಅನ್ನ: ನಿಮ್ಮ ಸೇವೆಗೆ ನಾನು ಋಣಿ ಎಂದ ಶಿವಣ್ಣ - ಶಿವರಾಜ್ಕುಮಾರ್ ಅಭಿಮಾನಿಗಳಿಂದ ಅನ್ನ ಸಂತರ್ಪಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6707980-thumbnail-3x2-new.jpg)
ಕೊರೊನಾ ಲಾಕ್ಡೌನ್ನಿಂದಾಗಿ ಅದೆಷ್ಟೋ ಜನರಿಗೆ ಒಂದು ಹೊತ್ತು ಊಟಕ್ಕೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ನಟರು ಹಾಗು ಅಭಿಮಾನಿಗಳು ಸಹಾಯಹಸ್ತ ಚಾಚಿದ್ದಾರೆ. ಹಸಿದವರು, ನಿರ್ಗತಿಕರಿಗೆ ಬೆಂಗಳೂರು, ಮಂಡ್ಯ, ಮೈಸೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಆಯಾ ಜಿಲ್ಲೆಗಳಲ್ಲಿರುವ ಶಿವರಾಜ್ ಕುಮಾರ್ ಅಭಿಮಾನಿ ಸಂಘಗಳು ಧವಸ ಧಾನ್ಯ ಹಾಗು ಊಟ ನೀಡುವ ಕೆಲಸ ಮಾಡುತ್ತಿವೆ. ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜ್‍ಕುಮಾರ್ ಸಂಘ, ಶಿವು ಅಡ್ಡ, ರಾಜವಂಶದ ಅಭಿಮಾನಿಗಳು ಸೇರಿ ಇತರ ಸಂಘಗಳು ಜನರಿಗೆ ಸಹಾಯ ಮಾಡುತ್ತಿರುವುದಕ್ಕೆ ಸ್ವತಃ ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Apr 22, 2020, 11:14 AM IST