ಮರಾಠ ಜನಾಂಗದವರು ಎಂಇಎಸ್, ಶಿವಸೇನಾಕ್ಕೆ ಬುದ್ದಿ ಹೇಳಿದ್ದಾರಾ?: ಸಾರಾ ಗೋವಿಂದ್ ಪ್ರಶ್ನೆ - ಕರ್ನಾಟಕ ಬಂದ್ ಬಗ್ಗೆ ಮಾತನಾಡಿದ ಸಾರಾ ಗೋವಿಂದ್
🎬 Watch Now: Feature Video
ಬೆಂಗಳೂರು : ಮರಾಠಾ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಡಿಸೆಂಬರ್ 5 ರ ರಾಜ್ಯ ಬಂದ್ ವಿಚಾರದಲ್ಲಿ ವ್ಯಾಪಕ ಪರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲಾ ಸಂಘಟನೆ ಒಂದುಗೂಡಿಸಲು ಮುಂದಾಗಿರುವ ವಾಟಾಳ್, ಸಾರಾಗೋವಿಂದ್ ಹಲವು ಸಂಘಟನೆಗಳ ಜೊತೆ ಜಂಟಿ ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿಯ ನಂತರ ಈ ಟಿ ವಿ ಭಾರತದ ಜೊತೆ ಮಾತನಾಡಿದ ಕನ್ನಡ ಪರ ಹೋರಾಟಗಾರ, ಮಾಜಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದ್, ಈಗಾಗಲೇ ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದು ಬಳ್ಳಾರಿಯಿಂದ ಪ್ರಾರಂಭ ಮಾಡಿದ್ದೇವೆ. ಬಳ್ಳಾರಿ, ಹೊಸಪೇಟೆ, ಕೊಪ್ಪಳ ದಲ್ಲಿ ಪ್ರತಿಭಟನೆ ಮುಗಿಸಿಕೊಂಡು ಬಂದಿದ್ದೇವೆ.ನಾಳೆ ಅತ್ತಿಬೆಲೆ ಗಡಿ ಪ್ರದೇಶವನ್ನು ಬಂದ್ ಮಾಡುತ್ತಿದ್ದೇವೆ.ನಾಡಿದ್ದು ಕೆ ಆರ್ ಪುರಂ ಹೈವೇ ಬಂದ್ ಮಾಡುತ್ತಿದ್ದೇವೆ.ನಾವು ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ,ಮೈಸೂರು, ಮಂಡ್ಯ, ಹಾಸನ ಪ್ರತಿಭಟನೆ ಮಾಡುತ್ತಿದ್ದು.ಅದಾದಮೇಲೆ ಡಿಸೆಂಬರ್ 1 ರಂದು ಎಲ್ಲಾ ಕನ್ನಡ ಪರ ಸಂಘಟನೆಗಳೊಂದಿಗೆ ಡಿ ಸಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದರು.
TAGGED:
sa ra govind news