ನಿರ್ಭಯಾ ಆತ್ಮಕ್ಕೆ ಇಂದು ಶಾಂತಿ ಸಿಗಲಿದೆ: ರಾಗಿಣಿ ದ್ವಿವೇದಿ - ರಾಗಿಣಿ ದ್ವಿವೇದಿ
🎬 Watch Now: Feature Video
ದೇಶವನ್ನು ಬೆಚ್ಚಿ ಬಿಳಿಸಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದೆ. ಈ ಬಗ್ಗೆ ಸ್ಯಾಂಡಲ್ ವುಡ್ ಬೋಲ್ಟ್ ನಟಿ ರಾಗಿಣಿ ದ್ವಿವೇದಿ ವಿಡಿಯೋ ಮೂಲಕ ಮಾತನಾಡಿದ್ದು, ಅವರು ಕೂಡ ಈ ದಿನಕ್ಕೆ ಕಾಯುತ್ತಿದ್ರಂತೆ. ಇಂದು ನಿರ್ಭಯಾ ಪ್ರಕರಣದ ಆರೋಪಿಗಳನ್ನ ಗಲ್ಲಿಗೇರಿಸಿರೋದು ಇತಿಹಾಸ. ನನಗೆ ತುಂಬಾ ಖುಷಿಯ ದಿನ, ಈ ದಿನಕ್ಕೋಸ್ಕರ ಇಡೀ ದೇಶವೇ ಕಾಯುತ್ತಿತ್ತು. ಅದ್ರಲ್ಲಿ ನಿರ್ಭಯ ಪರವಾಗಿ ವಾದ ಮಾಡಿದ ಮಹಿಳಾ ವಕೀಲೆಗೆ ಹಾಗೂ ನ್ಯಾಯಾಲಯಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು ಇಂದು ನಿರ್ಭಯ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.