ಕೆನಡಾದಲ್ಲಿ ಬಿಡುಗಡೆಗೊಂಡ ಕುರುಕ್ಷೇತ್ರ;ಸಾಗರದಾಚೆಗೂ ಅಬ್ಬರಿಸಿದ ದುರ್ಯೋಧನ! - ಕುರುಕ್ಷೇತ್ರ ಸಿನಿಮಾ
🎬 Watch Now: Feature Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಭರ್ಜರಿ ಇಪ್ಪತೈದು ದಿನಗಳನ್ನು ಪೂರೈಸಿ, ಐವತ್ತನೆೇ ದಿನದತ್ತ ಮುನ್ನುಗ್ಗುತ್ತಿದೆ. ಶತಕೋಟಿ ಸರ್ದಾರನಾಗಿ ಮೆರೆದಿದ್ರೂ ದುರ್ಯೋಧನನ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ದುರ್ಯೋಧನನ ದರ್ಬಾರ್ ಜೋರಾಗಿದೆ. ಕಳೆದ ವಾರವಾರಷ್ಟೆ ಗಲ್ಫ್ ದೇಶಗಳಲ್ಲಿ ತೆರೆ ಕಂಡಿದ್ದ ಕುರುಕ್ಷೇತ್ರ ಈ ವಾರ ಕೆನಡಾದಲ್ಲಿ ರಿಲೀಸ್ ಆಗಿದೆ. ಸಿನಿಮಾ ನೋಡಿದ ಕೆನಡಾದ ದಚ್ಚು ಅಭಿಮಾನಿಗಳು ಪುಲ್ ಖುಶ್ ಆಗಿದ್ದಾರೆ. ದಚ್ಚು ಫೋಟೋ ಹಿಡಿದು ಕೆನಡಾ ಅಭಿಮಾನಿಗಳು ಜೈಕಾರ ಹಾಕಿ ಸಂತಸ ವ್ಯಕ್ತಪಡಿಸಿದರು.ಈ ಮೂಲಕ ದುರ್ಯೋಧನನ ಸಾಗರದಾಚೆಗೂ ಅಬ್ಬರಿಸುತ್ತಿದ್ದಾನೆ.