ಹೊಸ ಫೋಟೋಶೂಟ್ನಲ್ಲಿ ಕಾರುಣ್ಯ ರಾಮ್ ಬೆಡಗು ಬಿನ್ನಾಣ - ಕಾರುಣ್ಯ ರಾಮ್ ಹೊಸ ಫೋಟೋಶೂಟ್
🎬 Watch Now: Feature Video
'ವಜ್ರಕಾಯ' ಸಿನಿಮಾ ಮೂಲಕ ಸ್ಯಾಂಡಲ್ವುಡ್ಲ್ಲಿ ಗಮನ ಸೆಳೆದಿದ್ದ ಕಾರುಣ್ಯ ರಾಮ್ ನಂತರ ರಿಯಾಲಿಟಿ ಶೋ ಅಂತೆಲ್ಲಾ ಬ್ಯುಸಿಯಾಗಿದ್ದರು. ಜೊತೆಗೆ ಬಿಗ್ಬಾಸ್ ಸೀಸನ್ 4 ರಲ್ಲೂ ಸ್ಫರ್ಧಿಯಾಗಿ ಭಾಗವಹಿಸಿದ್ದರು. ಅದಾದ ನಂತರ ಕಿರಗೂರಿನ ಗಯ್ಯಾಳಿಗಳು, ಎರಡು ಕನಸು ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. ಸದ್ಯಕ್ಕೆ ಅವರು ನಟಿಸಿರುವ ಹೊಸ ಚಿತ್ರ ರಣಭೂಮಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಕಾರುಣ್ಯ ಹೊಸ ಫೋಟೋಶೂಟ್ ಮಾಡಿಸಿದ್ದು, ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಕಾರುಣ್ಯ ಫೋಟೋಶೂಟ್ ಸಣ್ಣ ಝಲಕ್ ಇಲ್ಲಿದೆ.