ಸರ್ಜರಿಗೂ ಸೈ...ಸಂಗೀತ ನಿರ್ದೇಶನಕ್ಕೂ ಜೈ 'ಐ ಲವ್ ಯು' ಸಂಗೀತ ನಿರ್ದೇಶಕನ ವಿಶೇಷತೆ ಗೊತ್ತಾ? - ಡಾ. ಕಿರಣ್ ತೋಟಂಬೈಲು
🎬 Watch Now: Feature Video
ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ 'ಐ ಲವ್ ಯು' ಚಿತ್ರ ಕೆಲವೇ ದಿನಗಳಲ್ಲಿ 50 ದಿನಗಳನ್ನು ಪೂರೈಸಲಿದೆ. ಚಿತ್ರದ ಹಾಡುಗಳಂತೂ ಎಲ್ಲರ ಹೃದಯ ಗೆದ್ದಿದೆ. ಹಾಡುಗಳಿಗೆ ಸಂಗೀತ ನೀಡಿರುವ ಡಾ. ಕಿರಣ್ ತೋಟಂಬೈಲು ವೃತ್ತಿಯಲ್ಲಿ ವೈದ್ಯರು. ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿ ಇದ್ದರೂ ಓದು ಹಾಗೂ ವೃತ್ತಿಯಿಂದ ಅವರು ಸಂಗೀತದ ಕಡೆ ಗಮನಹರಿಸಲು ಸಾಧ್ಯವಾಗಿರಲಿಲ್ಲವಂತೆ. ಆದರೆ ಇದೀಗ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಅಲ್ಲದೆ ಮೊದಲ ಚಿತ್ರದಲ್ಲೇ ಯಶಸ್ಸು ಕಂಡಿದ್ದಾರೆ. ನಾಲ್ಕೈದು ಸಿನಿಮಾಗಳಿಗೆ ಈಗಾಗಲೇ ಆಫರ್ ಕೂಡಾ ಬಂದಿದೆಯಂತೆ. ಡಾ. ಕಿರಣ್ ಜೊತೆ ಈಟಿವಿ ಭಾರತ್ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.