ಕೊರೊನಾ ಕಷ್ಟ ಕಾಲದಲ್ಲಿ ಕೈ ಜೋಡಿಸಿ, ಬಡಜೀವಗಳನ್ನು ಉಳಿಸಲು ಸಹಕರಿಸಿ: ನಟ ಭುವನ್ ಮನವಿ - ನಟಿ ಹರ್ಷಿಕಾ ಪೂಣಚ್ಚಾ
🎬 Watch Now: Feature Video
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದೆ ಜನರು ಪ್ರಾಣ ಬಿಡುತ್ತಿದ್ದಾರೆ. ಕೊರೊನಾ ಕಷ್ಟ ಕಾಲದಲ್ಲಿ ಕೈ ಜೋಡಿಸಿ, ಬಡಜೀವಗಳನ್ನು ಉಳಿಸಲು ಸಹಕರಿಸಿ ಎಂದು ನಟ ಭುವನ್ ಪೊನ್ನಣ್ಣ ಮನವಿ ಮಾಡಿದ್ದಾರೆ. ಕೊರೊನಾ ಕಷ್ಟದಲ್ಲಿ ಇರುವವರಿಗೆ ಸಹಾಯ ಆಗಲೆಂದು ಬಿಬಿಎಂಪಿ ಮಾಡಿರೋ ವೆಬ್‌ಸೈಟ್ ಹಾಗೂ ಯಾವ ಅಧಿಕಾರಿಗಳು ಸಹಾಯಕ್ಕೆ ಬರೋದಿಲ್ಲ. ಇದರ ಅನುಭವ ನನಗೆ ಆಗಿದೆ. ಅದಕ್ಕಾಗಿ ಆಸ್ಪತ್ರೆಯಲ್ಲಿ ಬೆಡ್ ಅಥವಾ ಆಕ್ಸಿಜನ್ ಸಿಗದೆ ಇರುವವರು ನೇರವಾಗಿ ನನಗೆ ಫೋನ್ ಮಾಡಬಹುದು. ನನ್ನ ಕೈಯಲ್ಲಿ ಏನು ಸಹಾಯ ಆಗುತ್ತೆ ಅದನ್ನ ಮಾಡ್ತೀವಿ. ಹಾಗೇ ಒಂದು ವಾಟ್ಸ್‌ಆ್ಯಫ್ ಗ್ರೂಪ್ ಕೂಡ ಮಾಡಲಾಗಿದ್ದು, ಯಾರಿಗೆ ಸಹಾಯ ಬೇಕು ಅಂಥವರು ನನಗೆ ಸಂಪರ್ಕ ಮಾಡಿ ಎಂದು ಭುವನ್ ಪೊನ್ನಣ್ಣ ಹೇಳಿದರು.
Last Updated : May 2, 2021, 7:44 PM IST