'ಚಪಾಕ್' ಪ್ರೀಮಿಯರ್ ಶೋನಲ್ಲಿ ಎಲ್ಲರ ಕೇಂದ್ರಬಿಂದುವಾದ ದೀಪ್ವೀರ್ - ಮುಂಬೈನಲ್ಲಿ ಚಪಾಕ್ ಪ್ರೀಮಿಯರ್ ಶೋ
🎬 Watch Now: Feature Video
ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ನಿನ್ನೆ ಸಂಜೆ 'ಚಪಾಕ್' ಚಿತ್ರತಂಡ ಮುಂಬೈನಲ್ಲಿ ಪ್ರೀಮಿಯರ್ ಶೋ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ದೀಪಿಕಾ ನೀಲಿ ಬಣ್ಣದ ಸೀರೆಯುಟ್ಟು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ದೀಪಿಕಾ ಮಾತ್ರವಲ್ಲ, ರಣ್ವೀರ್ ಸಿಂಗ್ ಕೂಡಾ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದರು. ಈ ಕಾರ್ಯಕ್ರಮಕ್ಕೆ ದೀಪಿಕಾ ತಂದೆ ತಾಯಿ, ಬಾಲಿವುಡ್ ಸ್ಟಾರ್ಗಳಾದ ಭೂಮಿ ಪೆಡ್ನೇಕರ್, ಸಿದ್ದಾಂತ್ ಚತುರ್ವೇದಿ, ರಿತೇಶ್ ದೇಶ್ಮುಖ್ ಹಾಗು ಜೆನಿಲಿಯಾ ಡಿಸೋಜ, ಅರ್ಬಾಜ್ ಖಾನ್, ಹುಮಾ ಖುರಿಷಿ, ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರ, ಹಿರಿಯ ನಟಿ ರೇಖಾ, ಬೋನಿ ಕಪೂರ್ ಹಾಗೂ ಇನ್ನಿತರರು ಆಗಮಿಸಿದ್ದರು.