ನಮ್ಮ ನಿಮ್ಮ ಪ್ರೀತಿಯ ಬಾಲು ಬೇಗ ಎದ್ದು ಬರಲಿ ಮತ್ತೆ ಹಾಡಲಿ: ಕನ್ನಡದ ಕುಳ್ಳನ ಹಾರೈಕೆ - ಎಸ್ಪಿ ಬಾಲಸುಬ್ರಹ್ಮಣ್ಯಂ ಸುದ್ದಿ,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8494366-105-8494366-1597930347065.jpg)
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸ್ವರ ಸಾಮ್ರಾಟ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಇಂದು ದೇಶಾದ್ಯಂತ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದಾರೆ. ಅಲ್ಲದೆ ಕರ್ನಾಟಕದಲ್ಲೂ ಗಾನ ಗಾರುಡಿಗ ಕೊರೊನಾ ಗೆದ್ದು ಬರಲಿ ಎಂದು ಸಾಮೂಹಿಕ ಪ್ರಾರ್ಥನೆ ಮಾಡ್ತಿದ್ದಾರೆ. ಕನ್ನಡದ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗಾಗಿ ಪ್ರಾರ್ಥನೆ ಮಾಡಿ, ಕೊರೊನಾ ಗೆದ್ದು ಬಾ ಎಂದು ಹಾರೈಸಿದ್ದಾರೆ. ಅಲ್ಲದೆ ನಾವೆಲ್ಲ ಸೇರಿ ನಮ್ಮ ಪ್ರೀತಿಯ ಬಾಲುಗಾಗಿ ಪ್ರಾರ್ಥನೆ ಮಾಡೋಣ. ಅವರು ಬೇಗ ಎದ್ದು ಬರಲಿ. ಮತ್ತೆ ಹಾಡಲಿ ಎಂದು ದ್ವಾರಕೀಶ್ ಪ್ರಾರ್ಥಿಸಿದ್ದಾರೆ.