ಚಿತ್ರಮಂದಿರಗಳಲ್ಲಿ ಶೇ.100‌ ಪ್ರೇಕ್ಷಕರಿಗೆ ಅನುಮತಿ...ಮೊದಲ ದಿನದ ಸಂಭ್ರಮ ಹೇಗಿತ್ತು...? - Inspector Vikram released

🎬 Watch Now: Feature Video

thumbnail

By

Published : Feb 5, 2021, 12:07 PM IST

ಕೊರೊನಾದಿಂದಾಗಿ ನಷ್ಟದಲ್ಲಿದ್ದ ಕನ್ನಡ ಚಿತ್ರರಂಗ ಈಗ ಸುಧಾರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ತೆರೆದರೂ ಅಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ಇತ್ತು. ಬಸ್​​​​ನಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಶೇ.100 ರಷ್ಟು ಜನರಿಗೆ ಅವಕಾಶ ಇರುವಾಗ ಚಿತ್ರಮಂದಿರಗಳಲ್ಲಿ ಮಾತ್ರ ಏಕೆ ಇಲ್ಲ ಎಂದು ಸಿನಿಮಾ ಗಣ್ಯರು ಸರ್ಕಾರವನ್ನು ಪ್ರಶ್ನಿಸಿದ್ದರು. ಇದೀಗ ಕೊನೆಗೂ ಥಿಯೇಟರ್​​​​ಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಇದೇ ಖುಷಿಯಲ್ಲಿ ಇಂದು ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆಯಾಗುತ್ತಿರುವ ಸಿನಿಮಾಗಳು ಯಾವುವು...? ಚಿತ್ರಮಂದಿರಕ್ಕೆ 100ರಷ್ಟು ಅಭಿಮಾನಿಗಳು ಬಂದಿದ್ದಾರಾ...? ಥಿಯೇಟರ್​​​​ನಲ್ಲಿ ಸಂಭ್ರಮ ಹೇಗಿತ್ತು ಎಂಬುದರ ಬಗ್ಗೆ ಈಟಿವಿ ಭಾರತ್ ಪ್ರತಿನಿಧಿ ನಡೆಸಿದ ವಾಕ್​​​​ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.