ಹಿಜಾಬ್ ತೀರ್ಪಿಗೆ ಉಭಯ ಸಮುದಾಯಗಳು ತಲೆಬಾಗಬೇಕು:ರಂಭಾಪುರಿ ಶ್ರೀ - Hijab Controversy
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14764286-thumbnail-3x2-lek.jpg)
ಚಿಕ್ಕಮಗಳೂರು: ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಹಿಜಾಬ್ ವಿವಾದ ತಲೆ ನೋವಾಗಿದೆ. ಕೋರ್ಟ್ ತೀರ್ಪಿಗೆ ಉಭಯ ಸಮುದಾಯಗಳು ತಲೆಬಾಗಬೇಕು ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ರಂಭಾಪುರಿ ಶ್ರೀಗಳು ಹೇಳಿದರು. ಕೋರ್ಟ್ ತೀರ್ಪಿಗೆ ತಲೆ ಭಾಗಿ ನಡೆದುಕೊಳ್ಳುವುದು ಉತ್ತಮ ಬೆಳವಣಿಗೆ. ಧರ್ಮಕ್ಕೂ- ರಾಷ್ಟ್ರಕ್ಕೂ ಬಹಳ ವ್ಯತ್ಯಾಸವಿದೆ. ರಾಷ್ಟ್ರ ಧರ್ಮ ಪರಿಪಾಲಿಸುವುದು ಎಲ್ಲ ಧರ್ಮದ ಕರ್ತವ್ಯ. ಮನೆ ಹೊರಭಾಗದಲ್ಲಿ ಅವರ ಧಾರ್ಮಿಕ ಕುರುಹು, ಚಿಹ್ನೆಗಳನ್ನ ಆಚರಿಸಿಕೊಂಡು ಬರಲಿ, ಶಿಕ್ಷಣ ಕ್ಷೇತ್ರದಲ್ಲಿ ಸಮವಸ್ತ್ರ ಇರಬೇಕು ಎಂಬ ಕೋರ್ಟ್ ತೀರ್ಪು ಸ್ವಾಗತಾರ್ಹ. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದು ಒಳ್ಳೆಯದಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಇದೇ ಭಾವನೆ ಹೇಳಿದ್ದಾರೆ. ಕೋರ್ಟ್ ತೀರ್ಪಿಗೆ ಎಲ್ಲರೂ ಬದ್ಧರಾಗಿ ಶಾಂತಿ, ಸಂಯಮ ಕಾಪಾಡುವಂತೆ ಶ್ರೀಗಳು ಮನವಿ ಮಾಡಿದ್ದಾರೆ.
Last Updated : Feb 3, 2023, 8:20 PM IST