ಅದ್ಧೂರಿ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಸಜ್ಜು.. - melukote vairamudi fest
🎬 Watch Now: Feature Video
ಮಂಡ್ಯ: ನಾಳೆ ಅದ್ಧೂರಿಯಾಗಿ ನಡೆಯಲಿರುವ ಸುಪ್ರಸಿದ್ಧ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಸಜ್ಜಾಗಿದೆ. ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀಕ್ಷೇತ್ರದಲ್ಲಿ ವರ್ಣರಂಜಿತ ದೀಪಾಲಂಕಾರ ಮಾಡಲಾಗಿದ್ದು, ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಚೆಲುವನಾರಾಯಣಸ್ವಾಮಿ ದೇಗುಲ, ಬೆಟ್ಟದ ಯೋಗನರಸಿಂಹ ಸ್ವಾಮಿ ದೇಗುಲ, ಕಲ್ಯಾಣಿಗಳು ಸೇರಿದಂತೆ ರಾಜಬೀದಿಗಳಲ್ಲಿನ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿದೆ. ಈ ಬಾರಿ ಉತ್ಸವಕ್ಕೆ ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಡಿಸಿ ಅಶ್ವತಿ ಸೇರಿದಂತೆ ಇತರೆ ಅಧಿಕಾರಿಗಳು ವೈರಮುಡಿ ಉತ್ಸವದ ಸಿದ್ಧತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದಾರೆ.
Last Updated : Feb 3, 2023, 8:19 PM IST