ಕೆಫೆ ಹೊರಗೆ ಯುವಕರಿಂದ ಹನುಮಾನ್ ಚಾಲೀಸಾ ಸ್ತುತಿ: ವಿಡಿಯೋ ನೋಡಿ - ಹರ್ಯಾಣದಲ್ಲಿ ಯುವಕರ ಭಜನಾ ಮಂಡಳಿ

🎬 Watch Now: Feature Video

thumbnail

By

Published : Mar 22, 2023, 12:26 PM IST

ಹರ್ಯಾಣ: ಹಿರಿಯರು ಹಳ್ಳಿಗಳಲ್ಲಿ ಭಜನೆ ಹಾಡುವುದನ್ನು ನೋಡಿದ್ದೇವೆ. ತುಸು ಹೆಚ್ಚೆಂದರೆ ದೇವಸ್ಥಾನಗಳಲ್ಲಿ ಪೂಜಾ ವಿಶೇಷತೆಯಾಗಿ ಭಜಿಸುವುದು ಸಹಜ. ಆದರೆ, ಹರಿಯಾಣದಲ್ಲಿ ಯುವಕರ ತಂಡವೊಂದು ಹನುಮಾನ್​ ಚಾಲೀಸಾವನ್ನು ಕೆಫೆಯ ಹೊರಗೆ ಪಠಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಗುರುಗ್ರಾಮದ ಕೆಫೆಯ ಹೊರಗೆ ಕುಳಿತ ಯುವಕರ ತಂಡ ಸೊಗಸಾಗಿ ಚಾಲೀಸಾವನ್ನು ವಾದ್ಯಗಳ ಸಮೇತ ಹಾಡಿದ್ದಾರೆ. ಪ್ರತಿ ಮಂಗಳವಾರ ಈ ತಂಡ ಭಜಿಸುತ್ತಿರುವುದು ವಿಶೇಷ. ಗಿಟಾರ್, ಡೋಲಕ್​ ವಾದ್ಯಗಳನ್ನು ಹಾಡಿಗೆ ಬಳಸಿಕೊಂಡಿದ್ದಾರೆ. ಯುವಕರ ತಂಡದಲ್ಲಿ ಯುವತಿಯರೂ ಕೂಡಿಕೊಂಡಿದ್ದರು. ಇವರ ಭಜನೆಯನ್ನು ಕೇಳಲು ಜನರು ಗುಂಪುಗೂಡುತ್ತಾರೆ. ಗುಂಪಿನಲ್ಲಿಯೇ ಕೆಲವರು ವಾದ್ಯವೃಂದದವಾದರೆ, ಉಳಿದವರು ಸುತ್ತುವರೆದು ಹಾಡು ಭಜಿಸುತ್ತಾರೆ. ಪ್ರತಿ ಮಂಗಳವಾರ ನಡೆಯುವ ಯುವ ಭಜನಾ ಮಂಡಳಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ಹನುಮಾನ್‌ ಚಾಲೀಸಾ ಕುರಿತು..: ಹನುಮಾನ್​ ಚಾಲೀಸಾವೆಂದರೆ ಭಗವಾನ್​ ಹನುಮಂತನನ್ನು ಸ್ಮರಿಸುವ ಮತ್ತು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆ. ಸಂತ ತುಳಸೀದಾಸರು ಇದನ್ನು ಮೊಘಲ್​ ಚಕ್ರವರ್ತಿ ಔರಂಗಜೇಬನಿಂದ ಜೈಲಿನಲ್ಲಿ ಸೆರೆಯಾದಾಗ ರಚಿಸಿದ್ದರು. ಭಕ್ತಿಯಿಂದ ಸ್ಮರಿಸುವ ಹನುಮಾನ್‌ ಚಾಲೀಸಾ ಪಠಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರಾಗುತ್ತವೆ ಎಂಬುದು ಹಿಂದುಗಳ ನಂಬಿಕೆ.

ಇದನ್ನೂ ಓದಿ: ನೀರು ಉಳಿಸೋಣ..: ಕಡಲ ತೀರದಲ್ಲಿ ಸುದರ್ಶನ್‌ ಪಟ್ನಾಯಕ್‌ ಜನಜಾಗೃತಿ ಮರಳು ಕಲೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.