ರಾತ್ರಿ ಮನೆಗೆ ನುಗ್ಗಿ, ಪಿಸ್ತೂಲ್ ತೋರಿಸಿ ಯುವತಿಯ ಅಪಹರಣ! - ಸಬ್ ಇನ್ಸ್‌ಪೆಕ್ಟರ್ ಬಲ್ಜಿಂದರ್ ಸಿಂಗ್
🎬 Watch Now: Feature Video
ತರ್ನ್ ತರಣ್(ಪಂಜಾಬ್): ಮೂವರು ಯುವಕರು ನಿನ್ನೆ ರಾತ್ರಿ ಮನೆಯೊಂದಕ್ಕೆ ನುಗ್ಗಿ ಪಿಸ್ತೂಲ್ ತೋರಿಸಿ ಮನೆಯವರ ಮೇಲೆ ಹಲ್ಲೆ ನಡೆಸಿ 18 ವರ್ಷದ ಯುವತಿಯನ್ನು ಅಪಹರಿಸಿದ ಘಟನೆ ಜಿಲ್ಲೆಯ ಗಡಿಭಾಗದ ಪಹುವಿಂದ್ ಗ್ರಾಮದಲ್ಲಿ ನಡೆದಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಮೊದಲಿಗೆ ಯುವತಿಯ ತಾಯಿ, ಸಹೋದರಿ, ಸಹೋದರನಿಗೆ ಹೊಡೆದಿದ್ದಾರೆ. ನಂತರ ತಾಯಿಗೆ ಪಿಸ್ತೂಲ್ ತೋರಿಸಿ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ. ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಯುವತಿಯ ತಾಯಿ ರಾಣಿ ಮಾತನಾಡಿ, ಪತಿ ಶಿಂದಾ ಸಿಂಗ್ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಮನೆಯಲ್ಲಿ ನಾನು ಹಿರಿಮಗಳು, ಕಿರಿಮಗಳು ಹಾಗೂ ಮಗ ಇದ್ದೆವು. ಈ ವೇಳೆ ಏಕಾಏಕಿ ಕೆಲ ಯುವಕರು ಮನೆಗೆ ನುಗ್ಗಿ ನನ್ನ ಮೇಲೆ ದಾಳಿ ಮಾಡಿದರು. ಕೋಣೆಯಲ್ಲಿ ಕುಳಿತಿದ್ದ ಮಗಳ ತಲೆಗೆ ಹಾಕಿ ಸ್ಟಿಕ್ನಿಂದ ಹೊಡೆದು, ಅವಳನ್ನು ಕರೆದುಕೊಂಡು ಹೋದರು. ಸಹೋದರಿ ಪ್ರತಿಭಟಿಸಿದಾಗ ಯುವಕರು ಪಿಸ್ತೂಲ್ ತೋರಿಸಿ ಗಲಾಟೆ ಮಾಡಿದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರು ಎಂದು ವಿವರಿಸಿದರು.
ಯುವತಿಯ ತಂದೆ ಶಿಂದಾ ಸಿಂಗ್ ಮಾತನಾಡಿ, ಜುಲೈ 2022 ರಲ್ಲಿ ತನ್ನ ಅತ್ತಿಗೆಯ ಸಹೋದರ ತನ್ನ ಮಗಳನ್ನು ಕರೆದುಕೊಂಡು ಹೋಗಿದ್ದ. ಈ ಬಗ್ಗೆ ಭಿಖಿವಿಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಪೊಲೀಸರು ಆತನನ್ನು ಬಂಧಿಸಲಿಲ್ಲ. ಈ ಕಾರಣದಿಂದ ಇಂದು ಮನೆಗೆ ನುಗ್ಗಿ ಮನೆಯವರನ್ನು ಥಳಿಸಿ ಮಗಳನ್ನು ಅಪಹರಿಸಿದ್ದಾನೆ ಎಂದು ದೂರಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಮಗಳನ್ನು ವಾಪಸ್ ಕರೆತರುವಂತೆ ಸಂತ್ರಸ್ತ ಬಾಲಕಿಯ ಕುಟುಂಬದವರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಭಿಖಿವಿಂಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಲ್ಜಿಂದರ್ ಸಿಂಗ್, 6 ತಿಂಗಳ ಹಿಂದೆ ಸಲ್ಮಾನ್ ಎಂಬ ವ್ಯಕ್ತಿ ಯುವತಿಯನ್ನು ಅಪಹರಿಸಿದ್ದು, ಈ ಬಗ್ಗೆ ಭಿಖಿವಿಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇಂದು ಮತ್ತೆ ಸಲ್ಮಾನ್ ಯುವತಿಯನ್ನು ಅಪಹರಿಸಿದ್ದಾನೆ. ಭಿಖಿವಿಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ನೋಡಿ: ರಾಗಿ ಖರೀದಿ ಕೇಂದ್ರದಲ್ಲಿ ಅಗ್ನಿ ಅವಘಡ: 3 ಲಕ್ಷ ರೂ. ಮೌಲ್ಯದ ಬೆಳೆ ಬೆಂಕಿಗಾಹುತಿ