ನಡು ರಸ್ತೆಯಲ್ಲೇ ಗುಂಡಿನ ದಾಳಿ - ಯುವಕ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಭರ್ ರಸ್ತೆಯಲ್ಲಿ ಗುಂಡಿನ ದಾಳಿ
🎬 Watch Now: Feature Video
ಔರಂಗಾಬಾದ್ (ಮಹಾರಾಷ್ಟ್ರ) : ಹಣದ ವಿಚಾರವಾಗಿ ಎಂಹೆಚ್ ಛತ್ರಪತಿ ಸಂಭಾಜಿನಗರದ ಬೈಜಿಪುರ ವ್ಯಾಪ್ತಿಯ ಭರ್ ರಸ್ತೆಯಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಿಂದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ಮೂರು ಸುತ್ತು ಗುಂಡು ಹಾರಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಫಯಾಜ್ ಪಟೇಲ್ ಆರೋಪಿಯಾಗಿದ್ದು, ಮೃತರನ್ನು ಅಲ್ ಕುತುಬ್ ಹಬೀಬ್ ಹಮದ್ ಎಂದು ಗುರುತಿಸಲಾಗಿದೆ. ಸಮೀರ್ ಬಶೀರ್ ಪಠಾಣ್ ಗಾಯಗೊಂಡಿದ್ದಾರೆ.
ಮಾಹಿತಿ ಪ್ರಕಾರ ಮೃತ ಹಮದ್, ಆರೋಪಿ ಫಯಾಜ್ ಬಳಿ ಏಳೂವರೆ ಸಾವಿರ ರೂ. ಹಣ ಪಡೆದಿದ್ದು, ವಾಪಸ್ ನೀಡಲು ಹಿಂದೇಟು ಹಾಕಿದ್ದನು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಅನೇಕ ಬಾರಿ ವಾಗ್ವಾದ ನಡೆದಿತ್ತು. ಒಮ್ಮೆ ಫಯಾಜ್ ಗುಂಡು ಹಾರಿಸುವುದಾಗಿ ಬೆದರಿಕೆ ಸಹ ಹಾಕಿದ್ದ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹಯಾತ್ ಕ್ಲಿನಿಕ್ ಎದುರು ಹಮದ್ ಕುಳಿತಿದ್ದಾಗ ಎದುರಿನಿಂದ ಬಂದ ಆರೋಪಿ ಫಯಾಜ್ ತನ್ನ ಜೇಬಿನಿಂದ ಗನ್ ತೆಗೆದು ಗುಂಡು ಹಾರಿಸಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಜೀನೆಗೇರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.
ಇನ್ನು ಮೃತ ಅಲ್ ಕುತುಬ್ ಹಬೀಬ್ ಹಮದ್ ಪೈಠಾಣ್ ಗೇಟ್ ಪ್ರದೇಶದಲ್ಲಿ ಗಾರ್ಮೆಂಟ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ತಂದೆ - ತಾಯಿ ಬೇರೆಯಾಗಿದ್ದು, ತಾಯಿಯೊಂದಿಗೆ ವಾಸವಾಗಿದ್ದ. ಇದೇ ಆಗಸ್ಟ್ 20 ರಂದು ಮದುವೆ ನಿಶ್ಚಯವಾಗಿತ್ತು ಎಂದು ಪರಿಚಯಸ್ಥರೊಬ್ಬರು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮಗಳೆದುರು ಮಾನ ಕಳ್ಕೊಂಡ ತಂದೆ! ತಡೆದ ಮಗನಿಗೆ ಗುಂಡೇಟು, 8 KM ದೂರದ ಆಸ್ಪತ್ರೆಗೆ ರಾತ್ರಿ ನಡೆದೇ ಸಾಗಿದ ಅಣ್ಣ-ತಂಗಿ!