thumbnail

By

Published : Feb 27, 2023, 10:54 PM IST

ETV Bharat / Videos

ಲಂಡನ್​ನಲ್ಲಿ ಯಕ್ಷಗಾನ ಶೈಲಿಯ ತಾಂಡವ ನೃತ್ಯ- ವಿಡಿಯೋ ನೋಡಿ

ಮಂಗಳೂರು: ಬ್ರಿಟನ್‌ನಲ್ಲಿ​ ಯಕ್ಷಗಾನದ ಕಂಪನ್ನು ಕರಾವಳಿಗರೋರ್ವರು ವಿಭಿನ್ನವಾಗಿ ಪಸರಿಸಿದ್ದಾರೆ. ಲಂಡನ್​ನ ಭಾರತೀಯ ವಿದ್ಯಾ ಭವನದಲ್ಲಿ ಶುಕ್ರವಾರ ಶಿವರಾತ್ರಿ ಪ್ರಯುಕ್ತ ವಿವಿಧ ನೃತ್ಯ ಪ್ರಕಾರಗಳ ತಾಂಡವ ನೃತ್ಯ ಪ್ರಸ್ತುತಪಡಿಸಲಾಗಿತ್ತು.‌ ಇದರಲ್ಲಿ ಕರಾವಳಿಯ ಲೇಖಕ, ಯಕ್ಷಗಾನ ಕಲಾವಿದ ಯೋಗೀಂದ್ರ ಮರವಂತೆ ಯಕ್ಷಗಾನ ಶೈಲಿಯ ತಾಂಡವ ನೃತ್ಯ ಸಾದರಪಡಿಸಿದರು.

ನಟರಾಜನ ಸಪ್ತ ತಾಂಡವಗಳಲ್ಲಿ ಯೋಗೀಂದ್ರ ಮರವಂತೆ ಯಕ್ಷಗಾನ ಶೈಲಿಯ 'ಕಾಲಿಕಾ ತಾಂಡವ' ಪ್ರದರ್ಶಿಸಿದರು. ಪ್ರಸನ್ನ ಭಟ್ ಬಾಳ್ಕಲ್, ರಾಘವೇಂದ್ರ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ ಅವರ ಹಿಮ್ಮೇಳವನ್ನು ಬಳಸಲಾಗಿತ್ತು. ಯೋಗೀಂದ್ರ ಮರವಂತೆ ಲಂಡನ್​ನಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಹೆಂಡತಿಯೊಂದಿಗೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದುವೆಯಾದ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.