ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ.. ಮುಡಿ ಕೊಟ್ಟು ಹರಕೆ ತೀರಿಸಿದ ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ - ಮುಡಿ ಕೊಟ್ಟು ಹರಕೆ ತೀರಿಸಿದ ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ
🎬 Watch Now: Feature Video
ಚಿಕ್ಕಮಗಳೂರು: ತಾಲೂಕಿನಲ್ಲಿರುವ ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ಹಿನ್ನೆಲೆ ದತ್ತಪೀಠದಲ್ಲಿ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮುಡಿಯನ್ನು ಕೊಟ್ಟಿದ್ದಾರೆ. ಹಿಂದೂ ಅರ್ಚಕರನ್ನು ನೇಮಕ ಮಾಡಲೆಂದು ಗಂಗಾಧರ್ ಕುಲಕರ್ಣಿ ಹರಕೆ ಹೊತ್ತುಕೊಂಡಿದ್ದರು. ಇದೀಗ ಅರ್ಚಕರ ನೇಮಕವಾದ ಹಿನ್ನೆಲೆ ಮುಡಿ ಕೊಟ್ಟಿದ್ದಾರೆ. ನಾಲ್ಕು ವರ್ಷದಿಂದ ತಲೆ ಕೂದಲು ಕಟ್ಟಿಂಗ್ ಮತ್ತು ಶೇವಿಂಗ್ನನ್ನು ಗಂಗಾಧರ್ ಕುಲಕರ್ಣಿ ಮಾಡಿಸಿರಲಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ದತ್ತಪೀಠದಲ್ಲಿ ಮುಡಿ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿ ಹಲವು ಮುಖಂಡರು ಭಾಗಿ ಆಗಿದ್ದರು.
Last Updated : Feb 3, 2023, 8:37 PM IST