ಕಿಟಕಿ ಕಬ್ಬಿಣದ ಸರಳು ಮುರಿದು ಕಳ್ಳತನ.. ಸಿಸಿಟಿವಿಯಲ್ಲಿ ಖದೀಮನ ಕೃತ್ಯ ಸೆರೆ - ಕುಂಟೋಜಿ
🎬 Watch Now: Feature Video
ಮುದ್ದೇಬಿಹಾಳ: ಪಿಕೆಪಿಎಸ್‌ವೊಂದರ ಕಿಟಕಿ ಕಬ್ಬಿಣದ ಸರಳು ಮುರಿದು ಒಳನುಗ್ಗಿದ ಖದೀಮ ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ತಾಲೂಕಿನ ಕುಂಟೋಜಿಯಲ್ಲಿ ನಡೆದಿದೆ. ಸಂಘದ ಕಚೇರಿ ತೆರೆದಾಗ ಡ್ರಾಯರ್, ಸೇಫ್ ಲಾಕರ್ ಅಲ್ಮೇರಾ ಒಡೆದಿರುವುದು ಗಮನಕ್ಕೆ ಬಂದಿದೆ. ಕಳ್ಳ ಡ್ರಾಯರ್‌ನಲ್ಲಿಟ್ಟಿದ್ದ 60,749 ರೂ.ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಐ ಎಚ್.ಬಿ. ಸುತಗುಂಡಾರ, ಎಎಸ್‌ಐ ಡಿ.ಎಚ್.ಬಾಗೇವಾಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಅಗ್ಗಿಮಠ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated : Feb 3, 2023, 8:35 PM IST