ಕೆರೆಗೆ ಬಿದ್ದು ಪರದಾಡಿದ ನಾಲ್ಕು ಕಾಡಾನೆಗಳ ರಕ್ಷಣೆ.. ಕಾರ್ಯಾಚರಣೆ ಯಶಸ್ವಿ - ಸುಳ್ಯ ಅರಣ್ಯ ಅಧಿಕಾರಿಗಳು
🎬 Watch Now: Feature Video
ಸುಳ್ಯ(ದಕ್ಷಿಣ ಕನ್ನಡ): ಸುಳ್ಯದ ಅಜ್ಜಾವರ ಎಂಬಲ್ಲಿ ನಾಲ್ಕು ಕಾಡಾನೆಗಳು ತೋಟದ ಕೆರೆಗೆ ಬಿದ್ದು ಪರದಾಡಿದ ಘಟನೆ ನಡೆದಿದೆ. ರಾತ್ರಿ ಆಹಾರ ಹುಡುಕುತ್ತ ಬಂದ ಕಾಡಾನೆಗಳು ಸುಳ್ಯದ ಅಜ್ಜಾವರದ ಸನತ್ ರೈ ಎಂಬವರ ತೋಟದ ಕೆರೆಗೆ ಬಿದ್ದಿವೆ. ಬಿದ್ದಿರುವ ಆನೆಗಳಲ್ಲಿ ಎರಡು ದೊಡ್ಡ ಆನೆ ಮತ್ತು ಎರಡು ಮರಿಗಳಿದ್ದವು. ಸದ್ಯ ಸ್ಥಳಕ್ಕೆ ಸುಳ್ಯ ಅರಣ್ಯ ಅಧಿಕಾರಿಗಳು ಆಗಮಿಸಿ, ಕೆರೆಯನ್ನು ಅಗಲಮಾಡಿ ಕಾಡಾನೆಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕಾಗಿದ್ದು, ಇದು ಹೆಚ್ಚು ಮಳೆಯಾಗುವ ಪ್ರದೇಶವಲ್ಲದೆ, ಇಲ್ಲಿ ಕಾಡು ಪ್ರಾಣಿಗಳು ಸಹ ಹೆಚ್ಚಾಗಿವೆ. ಮಳೆಗಾಲದ ಅವಧಿಯಲ್ಲಂತೂ ಕಾಡಾನೆಗಳ ಕಾಟ ಅತಿ ಹೆಚ್ಚು. ಕಾಡಾನೆಗಳಂತು ಒಮ್ಮೆ ತೋಟಕ್ಕೆ ನುಗ್ಗಿದರೆ ಮೂರು ನಾಲ್ಕು ಅಡಿಕೆ ಮರವನ್ನು ಮುರಿಯದೇ ಹೋಗುವುದಿಲ್ಲ. ಇದೀಗ ಅಜ್ಜಾವರದ ಸನತ್ ರೈ ಎಂಬವರ ತೋಟಕ್ಕೆ ಇದೇ ರೀತಿ ಆನೆಗಳು ಬಂದಿದ್ದು, ಅಚಾನಕ್ ಆಗಿ ಕೆರೆಗೆ ಬಿದ್ದು ಆನೆಗಳಿಗೆ ಮೇಲೆ ಬರಲಾರದೇ ಫಜೀತಿಗೆ ಸಿಲುಕಿದ್ದವು. ಸದ್ಯ ಅರಣ್ಯ ಇಲಾಖೆಯು ರಕ್ಷಣಾ ಕಾರ್ಯಚರಣೆಯಿಂದ ಕೆರೆಗೆ ಬಿದ್ದ ಗಜಪಡೆಗಳಿಗೆ ಮರುಜೀವ ಬಂದಂತಾಗಿದೆ.
ಇದನ್ನೂ ಓದಿ: ಮನೆಯಲ್ಲಿ 80 ಮೊಟ್ಟೆಯಿಟ್ಟ ಹಾವು; ಕೊಂದು ಹಾಕಿದ ಜನರು!