ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ರಕ್ಷಣೆ; ಇಲಾಖೆ ವಾಹನದ ಮೇಲೆ ಸಿಟ್ಟು- ವಿಡಿಯೋ

🎬 Watch Now: Feature Video

thumbnail

By

Published : Jun 4, 2023, 7:59 AM IST

ಕೊಡಗು: ಇಲ್ಲಿನ ಕಾಫಿ ತೋಟದ ಕೆರೆಗೆ ಬಿದ್ದು ಕೆಸರಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದರು. ಕರಡ ಗ್ರಾಮದ ನಡಿಕೇರಿಯಂಡ ಐಯಣ್ಣ ಎಂಬವರ ತೋಟದಲ್ಲಿ ಘಟನೆ ನಡೆಯಿತು. ಕಾಫಿ ಗಿಡಗಳಿಗೆ ನೀರುಣಿಸಲು ಕೆರೆ ತೋಡಲಾಗಿತ್ತು. ಕಾಡಾನೆಗಳ ಗುಂಪು ಆಹಾರ ಅರಸಿ ತೋಟಕ್ಕೆ ಬಂದಿದ್ದು ಒಂದು ಕಾಡಾನೆ ಕೆರೆಗೆ ಬಿದ್ದಿತ್ತು.

ಕಾಡಾನೆ ಕೆರೆ ನೀರಿನ ಕೆಸರಲ್ಲಿ ಸಿಲುಕಿ ಮೇಲಕ್ಕೆ ಬರಲಾಗದೇ ಘೀಳಿಡುತ್ತಿತ್ತು. ಶಬ್ದ ಕೇಳಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆನೆ ರಕ್ಷಣಾ ಕಾರ್ಯಪಡೆ ಸ್ಥಳಕ್ಕೆ ಆಗಮಿಸಿ ಅಂದಾಜು 4 ಗಂಟೆಗಳ ಹರಸಾಹಸಪಟ್ಟು ಕೊನೆಗೂ ಆನೆಯನ್ನು ರಕ್ಷಿಸಿದರು. ಮೊದಲು ಜೆಸಿಬಿಯಿಂದ ಕೆರೆಯ ಬದಿಯಲ್ಲಿದ್ದ ಮಣ್ಣು ಸಮತಟ್ಟು ಮಾಡಿ ಮರದ ದಿಮ್ಮಿಗಳನ್ನು ಇಡಲಾಯಿತು. ಆನೆ ತನ್ನ ಸೊಂಡಿಲಿನಿಂದ ದಿಮ್ಮಿಗಳನ್ನು ಹಿಡಿದು ಮೇಲಕ್ಕೆ ಬಂತು.

ಕೆರೆಯಲ್ಲಿ ಸಾಕಷ್ಟು ಪರದಾಡಿದ ಆನೆ ನಿತ್ರಾಣಕ್ಕೆ ಒಳಗಾಗಿತ್ತು. ನಂತರ ಚೇತರಿಸಿಕೊಂಡು ಇಲಾಖೆ ವಾಹನದ ಮೇಲೆ ತನ್ನ ಕೋಪ ತೀರಿಸಿತು. ಪಟಾಕಿ ಸಿಡಿಸಿ ದೇವರಕಾಡಿಗೆ ಆನೆಯನ್ನು ಅಟ್ಟಲಾಯಿತು. ಈ ಸಂದರ್ಭದಲ್ಲಿ ಕಾಡಿನಲ್ಲಿ ಆನೆಗಳ ಗುಂಪು ಎದುರಾಗಿದ್ದು ಸ್ಥಳೀಯರು ಬೆಚ್ಚಿಬಿದ್ದರು. ಕೊಡಗು ಕಾಡು ಪ್ರದೇಶವಾಗಿದ್ದು ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅವುಗಳು ನಾಡಿಗೆ ಬರುವುದನ್ನು ತಡೆಯಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಸಫಾರಿಯಲ್ಲಿ ಆನೆ ದಾಳಿಯಿಂದ ವಿಚಾರವಾದಿ ಭಗವಾನ್, ದಲಿತ ಮುಖಂಡ ಪಾಪು ಗ್ರೇಟ್ ಎಸ್ಕೇಪ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.