ಮೈಸೂರು ಮೃಗಾಲಯದಲ್ಲಿ ಮರಿಗಳೊಂದಿಗೆ ಬಿಳಿ ಹುಲಿಯ ಚೆಲ್ಲಾಟ: ವಿಡಿಯೋ - Tara gave birth to three tiger cubs
🎬 Watch Now: Feature Video
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ರಾಕಿ ಮತ್ತು ಬಿಳಿ ಹುಲಿ ತಾರಾ ಜೋಡಿಗೆ ಮೂರು ಮರಿಗಳು ಜನಿಸಿವೆ. ಈ ಮರಿಗಳನ್ನು ಶನಿವಾರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಅಮ್ಮನೊಂದಿಗೆ ಮರಿಗಳ ಚೆಲ್ಲಾಟ ಪ್ರವಾಸಿಗರ ಗಮನ ಸೆಳೆಯಿತು. ಬಿಳಿ ಹುಲಿಯನ್ನು 2018ರಲ್ಲಿ ಪ್ರಾಣಿ ವಿನಿಮಯ ಯೋಜನೆಯಡಿ ಚೆನ್ನೈ ಮೃಗಾಲಯದಿಂದ ಮೈಸೂರು ಮೃಗಾಲಯಕ್ಕೆ ತರಲಾಗಿತ್ತು. ಹೆಣ್ಣು ಹುಲಿಗೆ ಮೈಸೂರಿನ ಹುಣಸೂರು ಅರಣ್ಯ ವಲಯದಲ್ಲಿ 2018ರಲ್ಲಿ ಗಂಡು ಹುಲಿ ರಾಕಿಯನ್ನು ಸಂತಾನ ಅಭಿವೃದ್ಧಿಗಾಗಿ ಬಳಸಲಾಗಿತ್ತು. ತಾರಾ ಕಳೆದ ಎಂಟು ತಿಂಗಳ ಹಿಂದೆ ಮೂರು ಹುಲಿ ಮರಿಗಳಿಗೆ ಜನ್ಮ ನೀಡಿದ್ದಳು. ಇದರಲ್ಲಿ 1 ಗಂಡು ಹಾಗು 2 ಹೆಣ್ಣು ಹುಲಿ ಮರಿಗಳು ಸೇರಿವೆ. ಇವುಗಳು 30 ರಿಂದ 35 ಕೆಜಿ ತೂಕ ಹೊಂದಿದ್ದು ಆರೋಗ್ಯವಾಗಿವೆ.
Last Updated : Feb 3, 2023, 8:36 PM IST