ಭಾರತವು ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಾದ ನೀತಿ ಹೊಂದಿದೆ: ಪ್ರಧಾನಿ ಮೋದಿ - ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು
🎬 Watch Now: Feature Video
ಕೋಲ್ಕತ್ತಾ, ಪಶ್ಚಿಮಬಂಗಾಳ: ಇಲ್ಲಿ ನಡೆಯುತ್ತಿರುವ ಜಿ 20 ಭ್ರಷ್ಟಾಚಾರ ವಿರೋಧಿ ವರ್ಕಿಂಗ್ ಗ್ರೂಪ್‌ನ ಮೂರನೇ ಮತ್ತು ಅಂತಿಮ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಪ್ರಧಾನಿ ಮೋದಿ ಅವರ ವರ್ಚುಯಲ್ ಭಾಷಣದಲ್ಲಿ, ಭ್ರಷ್ಟಾಚಾರವು ಬಡತನದ ಅಂಚಿನಲ್ಲಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಭ್ರಷ್ಟಾಚಾರದ ವಿರುದ್ಧ ಭಾರತ ಸರ್ಕಾರ ಕಟ್ಟುನಿಟ್ಟಾದ ಕ್ರಮಕೈಗೊಂಡಿದ್ದು, ಶೂನ್ಯ-ಸಹಿಷ್ಣು ನೀತಿಯನ್ನು ಹೊಂದಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.
ಕಾನೂನು ಜಾರಿ ಸಂಸ್ಥೆಗಳ ನಡುವೆ ಅನೌಪಚಾರಿಕ ಸಹಕಾರದ ಕುರಿತು ಒಪ್ಪಂದಕ್ಕೆ ಬಂದಿರುವುದಕ್ಕೆ ನನಗೆ ಸಂತಸವಾಗಿದೆ. ಏಕೆಂದರೆ ಇದು ಅಪರಾಧಿಗಳು ಕಾನೂನು ಲೋಪದೋಷಗಳ ಲಾಭವನ್ನು ಪಡೆಯುವುದನ್ನು ತಡೆಯುತ್ತದೆ. ಭ್ರಷ್ಟಾಚಾರ ಸಂಪನ್ಮೂಲಗಳ ಹಂಚಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ನಾವು ಆರ್ಥಿಕ ಅಪರಾಧಿಗಳ ಮೇಲೆ ನಿಗಾ ವಹಿಸಿದ್ದೇವೆ. 2018 ರಲ್ಲಿ ಆರ್ಥಿಕ ಅಪರಾಧ ಕಾಯ್ದೆಯನ್ನು ಜಾರಿಗೊಳಿಸಿದ್ದೇವೆ. ಅಂದಿನಿಂದ ನಾವು ಆರ್ಥಿಕ ಅಪರಾಧಿಗಳು ಮತ್ತು ವಂಚನೆ ಮಾಡಿದವರಿಂದ ಅಂದಾಜು $ 1.8 ಶತಕೋಟಿ ಡಾಲರ್ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು.
ಓದಿ: ತೆಲಂಗಾಣ ಗೆಲ್ಲಲು ಕಾಂಗ್ರೆಸ್ ಮಹಾ ಪ್ಲಾನ್.. ಡಿಕೆ ಶಿವಕುಮಾರ್ - ಪ್ರಿಯಾಂಕಾಗೆ ಹೆಚ್ಚಿನ ಹೊಣೆ!?