VIDEO: ಕುದುರೆ ಏರಿ ಗ್ರಾಹಕನಿಗೆ ಫುಡ್ ಡೆಲಿವರಿ ಮಾಡಿದ ಜೊಮ್ಯಾಟೊ ಬಾಯ್ - ಕುದುರೆ ಏರಿ
🎬 Watch Now: Feature Video
Published : Jan 4, 2024, 9:00 AM IST
ಹೈದರಾಬಾದ್, ತೆಲಂಗಾಣ: ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಿದ್ರೆ, ಅದನ್ನು ಕೆಲವೇ ನಿಮಿಷಗಳಲ್ಲಿ ಡೆಲಿವರಿ ಬಾಯ್ಗಳು ಗ್ರಾಹಕರಿಗೆ ತಲುಪಿಸುತ್ತಾರೆ. ಡೆಲಿವರಿ ವೇಳೆ ಟ್ರಾಫಿಕ್ ಹಾಗೂ ಇತರ ಅಡೆತಡೆ ಎದುರಿಸಿ ನಿಗದಿತ ಸಮಯಕ್ಕೆ ಆಹಾರ ತಲುಪಿಸಲು ಡೆಲಿವರಿ ಬಾಯ್ಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಈ ನಡುವೆ ವಾಹನದ ಪೆಟ್ರೋಲ್ ಖಾಲಿಯಾದರೆ ಅಥವಾ ಯಾವುದಾದರೂ ಕಾರಣಕ್ಕೆ ಗಾಡಿ ಕೈಕೊಟ್ಟರೆ ಅವರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಮೊನ್ನೆ ಮಂಗಳವಾರ ದೇಶಾದ್ಯಂತ ಪೆಟ್ರೋಲ್ ಕೊರತೆಯಿಂದಾಗ ಕೆಲವೆಡೆ ಡೆಲಿವರಿ ಬಾಯ್ಗಳೂ ಕೂಡ ಪರದಾಡುವಂತಾಗಿತ್ತು.
ಆದರೆ, ಇಲ್ಲೊಬ್ಬ ಫುಡ್ ಡೆಲಿವರಿ ಬಾಯ್ ತನ್ನ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾದಾಗ ಬಂಕ್ಗಳಲ್ಲಿ ಗಂಟೆಗಟ್ಟಲೇ ಕಾಯುವ ಬದಲು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಹೌದು, ಆರ್ಡರ್ ಮಾಡಿದ್ದ ಗ್ರಾಹಕನಿಗೆ ಕುದುರೆ ಏರಿ ಆಹಾರವನ್ನು ತಲುಪಿಸಿದ್ದಾರೆ. ಈ ಘಟನೆ ಹೈದರಾಬಾದ್‌ನ ಜನರ ಗಮನ ಸೆಳೆದಿದೆ.
ಮಂಗಳವಾರ ಬಂಕ್‌ನಲ್ಲಿ ಪೆಟ್ರೋಲ್‌ಗಾಗಿ ಸರದಿಯಲ್ಲಿ ನಿಂತಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ತನಗೆ ಬೇಕಾದಷ್ಟು ಇಂಧನ ಸಿಗದ ಕಾರಣ ಬೈಕ್ನ್ನು ಅಲ್ಲೇ ಬಿಟ್ಟಿದ್ದರು. ತದನಂತರ ಕುದುರೆ ಸವಾರಿ ಮಾಡಿಕೊಂಡು ಬಂದು ಗ್ರಾಹಕನಿಗೆ ಆಹಾರ ತಲುಪಿಸಿದರು. ಇದು ನಡೆದಿರುವುದು ಹೈದರಾಬಾದ್‌ನ ಚಂಚಲಗುಡ ಪ್ರದೇಶದಲ್ಲಿ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಓದಿ: ಜೊಮ್ಯಾಟೊ ಪ್ಲಾಟ್ಫಾರ್ಮ್ ಫೀ ₹1 ಹೆಚ್ಚಳ; ಪ್ರತಿ ಆರ್ಡರ್ಗೆ ಇನ್ನು ₹4 ಶುಲ್ಕ