Watch video: ಜೀ ಕರ್ದಾ ಸೀರಿಸ್ ಪ್ರಚಾರದ ವೇಳೆ ಪಂಜಾಬಿ ಡೋಲ್ ಬೀಟ್ಗೆ ಮಣಿದು ತಮನ್ನಾ ಡ್ಯಾನ್ಸ್ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಮುಂಬೈ (ಮಹಾರಾಷ್ಟ್ರ) : ಜೀ ಕರ್ದಾ ಸೀರಿಸ್ ಪ್ರಚಾರಕ್ಕಾಗಿ ನಟಿ ತಮನ್ನಾ ಭಾಟಿಯಾ ಶುಕ್ರವಾರ ಮುಂಬೈನ ತಾನು ಓದಿದ್ದ ಅಲ್ಮಾ ಮೇಟರ್ ಆರ್‌ಡಿ ನ್ಯಾಷನಲ್ ಕಾಲೇಜಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪಂಜಾಬಿ ಡೋಲ್ ಬೀಟ್ಗೆ ಮಣಿದ ತಮನ್ನಾ ಡ್ಯಾನ್ಸ್ ಮಾಡಿ ನೆರೆದಿದ್ದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಆಶ್ಚರ್ಯಗೊಳಿಸಿದರು. ಬಳಿಕ ಕಾಲೇಜಿನ ಒಳಗೆ ನಡೆದರು. ಜೀ ಕರ್ದಾ ಒಂದು ತಿಂಗಳ ಹಿಂದೆ ಓಟಿಟಿ ಪ್ಲಾಟ್‌ಫಾರ್ಮ್‌ನ ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿದ್ದು, ವೀಕ್ಷಕರಿಂದ ಸಾಕಷ್ಟು ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿದೆ.
ಜೀ ಕರ್ದಾ ಸೀರಿಸ್ ಅನ್ನು ಅರುಣಿಮಾ ಶರ್ಮಾ ನಿರ್ದೇಶಿಸಿದ್ದು, ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಸೀರಿಸ್ ಕಥೆಯನ್ನು ಹುಸೇನ್ ದಲಾಲ್, ಅರುಣಿಮಾ ಶರ್ಮಾ ಮತ್ತು ಅಬ್ಬಾಸ್ ದಲಾಲ್ ಸಹ - ಬರೆದಿದ್ದಾರೆ. ತಮನ್ನಾ ಭಾಟಿಯಾ, ಆಶಿಮ್ ಗುಲಾಟಿ, ಸುಹೇಲ್ ನಯ್ಯರ್, ಅನ್ಯಾ ಸಿಂಗ್, ಹುಸೇನ್ ದಲಾಲ್, ಸಯಾನ್ ಬ್ಯಾನರ್ಜಿ ಮತ್ತು ಸಂವೇದ್ನಾ ಸುವಾಲ್ಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : Tamannaah Bhatia: 'ವೇದಾ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ