Watch Video: ಬೆಡ್ ರೂಮಿಗೆ ಬಂದು ಯುವಕನ ಪಕ್ಕ ಹಾಯಾಗಿ ಮಲಗಿದ್ದ ನಾಗರ ಹಾವು! - Mysore Snake Video
🎬 Watch Now: Feature Video
ಮೈಸೂರು: ಬೆಡ್ ರೂಮಿಗೆ ಬಂದು ಹಾಯಾಗಿ ಮಲಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ಘಟನೆ ನಗರದ ಚೆನ್ನಮ್ಮ ವೃತ್ತದ ಬಳಿ ನಡೆದಿದೆ. ಹೆಬ್ಬಾಳದ ಎರಡನೇ ಹಂತದಲ್ಲಿರುವ ಪ್ರಜ್ವಲ್ ಎಂಬವರ ಮನೆಗೆ ಯಾರೂ ಇಲ್ಲದ ವೇಳೆ ಅದೇಗೋ ಹೊಕ್ಕಿದ್ದ ಸರ್ಪ, ಅವರು ಮಲಗಿದ್ದ ಹಾಸಿಗೆಯ ಮೇಲೆಯೇ ಮಲಗಿತ್ತು. ಕೊಠಡಿಯಲ್ಲಿ ತಾನು ಮಲಗಿದ್ದ ಪಕ್ಷದಲ್ಲೇ ಬುಸ್ ಬುಸ್ ಎಂಬ ಬುಸುಗುಡುತ್ತಿದ್ದ ಸದ್ದು ಕೇಳಿ ಬರುತ್ತಿತ್ತು. ಈ ಶಬ್ದ ಕೇಳಿ ಎಚ್ಚರಗೊಂಡ ಯುವಕ ಪ್ರಜ್ವಲ್, ಅನುಮಾನದಿಂದ ಹಾಸಿಗೆ ತೆಗೆದಾಗ ಈ ಹಾವು ಇರುವುದು ಕಂಡು ಬಂದಿದೆ. ಹೆಡೆ ಎತ್ತಿದ ನಾಗರ ಹಾವು ಕಂಡು ತಕ್ಷಣ ಭಯಭೀತನಾದ ಪ್ರಜ್ವಲ್ ಮನೆಯಿಂದ ಹೊರ ಓಡಿ ಹೋಗಿದ್ದಾನೆ. ಬಳಿಕ ಇಂತಹದ್ದೊಂದು ಸುದ್ದಿ ತಿಳಿದು ಸ್ಥಳಕ್ಕೆ ಬಂದ ಉರಗತಜ್ಞ ಸ್ನೇಕ್ ಶ್ಯಾಮ್ ಅವರು ಸುರಕ್ಷಿತವಾಗಿ ಹಾವನ್ನು ಹಿಡಿದಿದ್ದಾರೆ. ಭೀಮನ ಅಮಾವಾಸ್ಯೆ ಇದ್ದ ಕಾರಣ ಹಾವಿಗೆ ಪೂಜೆ ಸಲ್ಲಿಸಿದ ಅಕ್ಕ-ಪಕ್ಕದ ಮನೆಯ ಮಹಿಳೆಯರು ಹಾವಿಗೆ ಕೈ ಮುಗಿದು ಬೇಡಿಕೊಂಡ ಘಟನೆ ಕೂಡ ನಡೆಯಿತು.
ಇದನ್ನೂ ಓದಿ: ಅಡುಗೆ ಮನೆ ಹೊಕ್ಕಿದ್ದ ನಾಗರಹಾವು : ವಿಷಕಾರಿ ಸರ್ಪದಿಂದ ಮನೆಯವರನ್ನು ಕಾಪಾಡಿದ ಬೆಕ್ಕುಗಳು