ತೃಣಮೂಲ ಕಾಂಗ್ರೆಸ್ ಬೂತ್ ಸಮ್ಮೇಳನದಲ್ಲಿ ಅಶ್ಲೀಲ ನೃತ್ಯ : ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
🎬 Watch Now: Feature Video
ತುಫನ್ಗಂಜ್ (ಪಶ್ಚಿಮಬಂಗಾಳ): ತುಫನ್ಗಂಜ್ನ ಬಲಭುತ್ ಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್ ಬೂತ್ ಸಮ್ಮೇಳನದಲ್ಲಿ "ಅಶ್ಲೀಲ ನೃತ್ಯ" ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ವೇದಿಕೆಯಲ್ಲಿ ಹುಡುಗಿಯರು ನೃತ್ಯ ಮಾಡುವಾಗ ಬಲಭುತ್ ಟಿಎಂಸಿ ಅಧ್ಯಕ್ಷ ಅಲ್ತಾಫ್ ಅಲಿ ಬೇಪಾರಿ ಮತ್ತು ಇತರ ನಾಯಕರು ವೇದಿಕೆ ಮೇಲೆ ಇರುವುದನ್ನು ಕಾಣಬಹುದು. ಇದನ್ನು ಬಿಜೆಪಿ ಮತ್ತು ಟಿಎಂಸಿ ನಾಯಕರು ಖಂಡಿಸಿದ್ದಾರೆ.
ಶುಕ್ರವಾರದಂದು ಬಲಭುತ್ ಗ್ರಾಮದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ನಾಯಕರ ಬೂತ್ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನಲ್ಲಿ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಪ್ಪಲ್ ದಾಸ್, ಈಗಿನ ಸರಕಾರ ಬಂಗಾಳದ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಟಿಎಂಸಿ ಕಾರ್ಯಕರ್ತರನ್ನು ಕುಳ್ಳಿರಿಸಿಕೊಂಡು ಈ ರೀತಿ ಅಶ್ಲೀಲ ನೃತ್ಯ ಮಾಡಿ ರಾಜ್ಯದ ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ತುಫಂಗಂಜ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಬಸಕ್, ನಾನು ವೈರಲ್ ವಿಡಿಯೋವನ್ನು ನೋಡಿದ್ದೇನೆ. ಪಕ್ಷದ ಸಮಾವೇಶದಲ್ಲಿ ಇಂತಹ ನೃತ್ಯ ಮಾಡಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಂಗಪಂಚಮಿ ಸಂಭ್ರಮ: ಕುಣಿದು ಕುಪ್ಪಳಿಸಿದ ಯುವಕ ಯುವತಿಯರು..